ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಮಂಚೂಣಿಯಲ್ಲಿರುವ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಪ್ರಾಥಮಿಕ (2 ಮತ್ತು5) ತರಗತಿ ಮಕ್ಕಳಿಗೆ ಅರ್ಧದಿನದ ಅಬಾಕಸ್ ಸ್ಪರ್ಧೆ ಆಯೋಜಿಸಲಾಗಿತ್ತು.
ಆಡಳಿತಾಧಿಕಾರಿ ರೆನಿಟಾ ಲೋಬೊ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅತಿಕಡಿಮೆ ಸಮಯದಲ್ಲಿ ವಿವಿಧ ರೀತಿಯ ಮನೋಗಣಿತ ಲೆಕ್ಕಗಳನ್ನು ಮಾಡುವ ಮೂಲಕ ಸುಮಾರು 125 ಮಕ್ಕಳು ತಮ್ಮ ಪಾಲಕರ ಉಪಸ್ಥಿತಿಯಲ್ಲಿ ಎಲ್ಲರಿಂದ ಪ್ರಶಂಸೆಗೆ ಒಳಗಾದರೂ ಅತ್ಯಂತ ಕ್ರಿಯಾಶೀಲತೆಯಿಂದ ಆರಂಭಗೊಂಡ ಈ ಸ್ಪರ್ಧೆಯು ಎಲ್ಲರಿಂದ ಮೆಚ್ಚುಗೆ ಗಳಿಸಿತು.

ಶಿಕ್ಷಣದಲ್ಲಿ ಸದಾ ನವೀನತೆಯನ್ನು ಪರಿಚಯಿಸುತ್ತಿರುವ ಆಡಳಿತಮಂಡಳಿಯ ಉತ್ಸುಕತೆಯನ್ನು ಪೋಷಕರು ಕೊಂಡಾಡಿದರು. ತಮ್ಮ ಮಕ್ಕಳ ಮನೋಗಣಿತದ ಬುದ್ಧಿಮತ್ತೆಯನ್ನು ಕಣ್ಣಾರೆ ಕಂಡ ಎಲ್ಲಾ ಪಾಲಕರು ಅತೀವ ಸಂತಸಪಟ್ಟು ಸಂಭ್ರವಿಸಿದರು.
ಅಬಾಕಸ್ ತರಬೇತುದಾರರಾದ ಗೀತಾ (ಉಪನ್ಯಾಸಕರು ಮದರ್ ತೆರೇಸಾಸ್ ಪಿ ಯು ಕಾಲೇಜು, ವೇದಿಕ್ ಮಾಥ್ಸ್ ಮತ್ತು ಅಬಾಕಸ್ ತರಬೇತುದಾರರು ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತರು) ಅವರು ಅರ್ಧದಿನ ವಿದ್ಯಾರ್ಥಿಗಳಿಗೆ ಮನೋಗಣಿತದ ವಿವಿಧ ಹಂತದ ಲೆಕ್ಕಗಳನ್ನು ಲಿಖಿತ ಮತ್ತು ಮೌಖಿಕವಾಗಿ ನಡೆಸಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಜ್ಞಾಪನಾ ಶಕ್ತಿ, ತಾರ್ಕಿಕ ಚಿಂತನೆ, ಕೈ ಮತ್ತು ಕಣ್ಣಿನ ಸಮನ್ವಯತೆ, ಏಕಾಗ್ರತೆ, ಧಾರಣಶಕ್ತಿ,ಮಾನಸಿಕ ಲೆಕ್ಕಾಚಾರಗಳನ್ನು ಪರೀಕ್ಷಿಸಿದರು.
ಅಲಿಟಾ ಡೇಸಾ ಆಂಗ್ಲಭಾಷಾ ಉಪನ್ಯಾಸಕರು ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ )ಮಂಗಳೂರು) ಕಾರ್ಯಕ್ರಮದಲ್ಲಿ ಅಬಾಕಸ್ ಕಲಿಕೆ ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಹಾಗೂ ಸೃಜನಶೀಲತೆಗೆ ಹೇಗೆ ಸಹಾಯಕ ಎಂಬುದರ ಕುರಿತು ನಿರೂಪಣೆಯೊಂದಿಗೆ ಸಂಕ್ಷಿಪ್ತ ವಿವರಣೆ ನೀಡಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಪಾಲಕರು, ಉಪನ್ಯಾಸಕರು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು
ಶಿಕ್ಷಕಿ ಅವಿನಾ ಡಿಸೋಜಾ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.















