ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಮಂಚೂಣಿಯಲ್ಲಿರುವ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಪ್ರಾಥಮಿಕ (6&7ನೇ) ತರಗತಿ ಮಕ್ಕಳಿಗೆ ಅರ್ಧದಿನದ ವೇದಿಕ್ ಮಾಥ್ಸ್ ಸ್ಪರ್ಧೆ ಆಯೋಜಿಸಲಾಯಿತು.
ಆಡಳಿತಾಧಿಕಾರಿ ರೆನಿಟಾ ಲೋಬೊ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅತಿಕಡಿಮೆ ಸಮಯದಲ್ಲಿ ವಿವಿಧ ರೀತಿಯ ಗಣಿತದ ಲೆಕ್ಕಗಳನ್ನು ಮಾಡುವ ಮೂಲಕ ಸುಮಾರು 100 ವಿದ್ಯಾರ್ಥಿಗಳು ತಮ್ಮ ಪಾಲಕರ ಉಪಸ್ಥಿತಿಯಲ್ಲಿ ತಮ್ಮತಮ್ಮ ಚಾಣಾಕ್ಷತೆಯನ್ನು ಪ್ರದರ್ಶಿಸಿ ಎಲ್ಲರಿಂದ ಪ್ರಶಂಸೆಗೆ ಒಳಗಾದರೂ ಅತ್ಯಂತ ಚುರುಕುತನದಿಂದ ಆರಂಭಗೊಂಡ ಈ ಸ್ಪರ್ಧೆಯು ಪಾಲಕರ ಪೋಷಕರಿಂದ ಮೆಚ್ಚುಗೆ ಗಳಿಸಿತು.
ಶಿಕ್ಷಣದಲ್ಲಿ ಸದಾ ನಾವಿನ್ಯತೆಯನ್ನು ಪರಿಚಯಿಸುತ್ತಿರುವ ಆಡಳಿತಮಂಡಳಿಯ ಉತ್ಸುಕತೆಯನ್ನು ಪೋಷಕರು ಕೊಂಡಾಡಿದರು . ತಮ್ಮ ಮಕ್ಕಳ ಗಣಿತದ ಕೌಶಲ್ಯವನ್ನು ಕಣ್ಣಾರೆ ಕಂಡ ಎಲ್ಲಾ ಪಾಲಕರು ಅತೀವ ಸಂತಸಪಟ್ಟು ಸಂಭ್ರವಿಸಿದರು
ವೇದಿಕ್ ಮಾಥ್ಸ್ ತರಬೇತುದಾರರಾದ ಗೀತಾ (ಉಪನ್ಯಾಸಕರು ಮದರ್ ತೆರೇಸಾಸ್ ಪಿ ಯು ಕಾಲೇಜು, ವೇದಿಕ್ ಮಾಥ್ಸ್ ಮತ್ತು ಅಬಾಕಸ್ ತರಬೇತುದಾರರು ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತರು) ಇವರು ಅರ್ಧದಿನ ವಿದ್ಯಾರ್ಥಿಗಳಿಗೆ ಗಣಿತದ ವಿವಿಧ ಹಂತದ ಲೆಕ್ಕಗಳನ್ನು ಲಿಖಿತ ಮತ್ತು ಮೌಖಿಕವಾಗಿ ನಡೆಸಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಜ್ಞಾಪನಾ ಶಕ್ತಿ, ತಾರ್ಕಿಕಚಿಂತನೆ, ಏಕಾಗ್ರತೆ, ಧಾರಣಶಕ್ತಿ,ಮಾನಸಿಕ ಲೆಕ್ಕಾಚಾರಗಳನ್ನು ಪರೀಕ್ಷಿಸಿದರು.
ಅಲಿಟಾ ಡೇಸಾ ಆಂಗ್ಲಭಾಷಾ ಉಪನ್ಯಾಸಕರು ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ ) ಮಂಗಳೂರು ಅವರು ಈಗಿನ ವಿದ್ಯಾರ್ಥಿಗಳಿಗೆ ಗಣಿತ ವಿಷಯವೆಂದರೆ ಅಲರ್ಜಿ, ಒಂದು ಚಿಕ್ಕ ಲೆಕ್ಕ ಹೇಳಿದರೂ ಕಂಪ್ಯೂಟರ್, ಕ್ಯಾಲ್ಕ್ಯೂಲೇಟರ್ ಮತ್ತು ಮೊಬೈಲ್ ಮೊರೆ ಹೋಗುತ್ತಾರೆ ಇದರಿಂದ ವಿದ್ಯಾರ್ಥಿಗಳ ಜ್ಞಾನ ವೃದ್ಧಿಯಾಗುವುದಿಲ್ಲ ಎಂದು ಕಾರ್ಯಕ್ರಮದಲ್ಲಿ ವೇದಿಕ್ ಮಾಥ್ಸ್ ಕಲಿಕೆ ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಹಾಗೂ ಸೃಜನಶೀಲತೆಗೆ ಹೇಗೆ ಸಹಾಯಕ ಏಕಾಗ್ರತೆಯಿಂದ ಗಣಿತದ ಸಮೀಕರಣ, ಘನಗಳು, ಘನಮೂಲಗಳು, ಭಿನ್ನಾರಾಶಿಗಳು, ಪ್ರಮೇಯ ಇತ್ಯಾದಿ ಸಮಸ್ಯೆಗಳನ್ನು ವೇಗವಾಗಿ ಮತ್ತು ನಿಖರವಾಗಿ ಪರಿಹರಿಸಲು ಗಣಿತದ ಮಾನಸಿಕ ವ್ಯವಸ್ಥೆಯನ್ನು ಮತ್ತು ವಿದ್ಯಾರ್ಥಿಗಳ ಜ್ಞಾಪನಾಶಕ್ತಿಯನ್ನು ವೃದ್ಧಿಸಲು ಹೇಗೆ ವೇದಿಕ್ ಮಾಥ್ಸ್ ಅತೀ ಅಗತ್ಯ ಎಂಬುದರ ಕುರಿತು ನಿರೂಪಣೆಯೊಂದಿಗೆ ಸಂಕ್ಷಿಪ್ತ ವಿವರಣೆ ನೀಡಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭ ಕೋರಿದರು ಪಾಲಕರು, ಉಪನ್ಯಾಸಕರು,ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.
ಶಿಕ್ಷಕಿ ಅವಿನಾ ಡಿಸೋಜಾ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕಿ ದೀಪಾ ವಂದಿಸಿದರು.















