62ನೇ ಸಹಕಾರಿ ಸಪ್ತಾಹ: ಸಹಕಾರಿ ಮಾರುಕಟ್ಟೆ ಸಂಸ್ಕರಣ ಮತ್ತು ಮೌಲ್ಯವರ್ಧನೆ ಕುರಿತ ಉಪನ್ಯಾಸ

Call us

Call us

Call us

ಬೈಂದೂರು: ಕೃಷಿಯಿಂದ ಏನೂ ಪ್ರಯೋಜನವಾಗದು. ಕೃಷಿ ಅನುತ್ಪಾದಕ ಕ್ಷೇತ್ರವೆಂದು ಸಾರಾಸಗಟಾಗಿ ತಿರಸ್ಕರಿಸಿ ಇತ್ತೀಚಿನ ದಿನಗಳಲ್ಲಿ ಕೃಷಿ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಈ ಕ್ಷೇತ್ರದಲ್ಲಿ ಯಾಕೆ ಹೀಗಾಗಿದೆ ಎಂದು ಕೃಷಿಪತ್ತಿನ ಸಹಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಉಡುಪಿ ತೆಂಕನಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಹಪ್ರಾಧ್ಯಾಪಕ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್ ಹೇಳಿದರು.

Call us

Click Here

ನಾಗೂರು ಶ್ರೀಕೃಷ್ಣಲಲಿತ ಕಲಾಮಂದಿರದಲ್ಲಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಪ್ರಾಯೋಜಿಸಿದ ರೈತಶಕ್ತಿ, ರೈತ ಸೇವಾ ಒಕ್ಕೂಟ ಉಪ್ಪುಂದ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ಇವರ ಸಹಭಾಗಿತ್ವದಲ್ಲಿ ನಡೆದ 62ನೇ ಸಹಕಾರಿ ಸಪ್ತಾಹ ಹಾಗೂ ಸಹಕಾರಿ ಮಾರುಕಟ್ಟೆ ಸಂಸ್ಕರಣ ಮತ್ತು ಮೌಲ್ಯವರ್ಧನೆ ಕುರಿತ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.

ಕೃಷಿ ಇಲ್ಲದೇ ಜಗತ್ತಿನ ಯಾವುದೇ ಮೂಲೆಯಲ್ಲಿ ಯಾರೂ ಬದುಕಲು ಸಾಧ್ಯವಿಲ್ಲ. ಅತೀ ದೊಡ್ಡಪ್ರಮಾಣದಲ್ಲಿ ಜನಸಂಖ್ಯೆ ಬೆಳೆಯುತ್ತಿದೆ, ಹಾಗಾಗಿ ಅಷ್ಟೇ ದೊಡ್ಡಪ್ರಮಾಣದಲ್ಲಿ ಆಹಾರ ಉತ್ಪಾದನೆ ಕೃಷಿಯಿಂದ ಮಾತ್ರ ಸಾಧ್ಯ. ನಮ್ಮ ಆಹಾರವನ್ನು ನಮಗೆ ಮಾತ್ರ ಸೀಮಿತಗೊಳಿಸದೇ ಎಲ್ಲರೂ ಒಪ್ಪಿಕೊಳ್ಳುವ ಹಾಗೆ ಮಾಡುವುದು ಹೇಗೆಂಬ ಬಗ್ಗೆ ವಿಮರ್ಶಿಸಿ ಉತ್ತರ ಕಂಡುಕೊಳ್ಳಬೇಕಾಗಿದೆ. 1904ರಲ್ಲಿ ಪ್ರಾರಂಭವಾದ ಸಹಕಾರಿ ಚಳುವಳಿ ಮೊದಲು ಪತ್ತಿಗೆ ಮಾತ್ರ ಸೀಮಿತವಾಗಿತ್ತು. ನಂತರ 1912ರಲ್ಲಿ ಇದು ಮಾರುಕಟ್ಟೆಗೂ ಲಿಂಕ್ ಮಾಡಲಾಯಿತು. ಹಂತ ಹಂತವಾಗಿ ಬೆಳೆದು ಇಂದು ತಮ್ಮ ಬೇರುಗಳನ್ನು ಗಟ್ಟಿಗೊಳಿಸಿ ಬಲಾಢ್ಯವಾಗಿ ಬೆಳೆದು ನಿಂತಿದೆ ಎಂದರು.

ನಮ್ಮ ವಸ್ತುಗಳ ಮಾರುಕಟ್ಟೆಲ್ಲಿ ಮಾರಾಟವಾಗುತ್ತಿಲ್ಲವೆಂದಾದರೆ ನಾವು ಎಲ್ಲಿ ತಪ್ಪಿದ್ದೇವೆ ಎಂಬ ಕುರಿತು ತಿರುಗಿ ನೋಡಬೇಕಾದ ಅವಶ್ಯಕತೆಯಿದೆ. 90ರ ದಶಕದಲ್ಲಿ ಜಾಗತಿಕ ಮಾರುಕಟ್ಟೆಗೆ ಪ್ರವೇಶ ಮಾಡಿದ್ದರಿಂದ ನಾವು ಸ್ಪರ್ಧೆಗೆ ಅಣಿಯಾಗಬೇಕಾಗಿದೆ. ನಮ್ಮಲ್ಲಿ ಬೆಳೆಯುವ ಬಾಳೆ, ಕಬ್ಬು, ಶೇಂಗಾ, ಭತ್ತ ಮೊದಲಾದವುಗಳನ್ನು ಪರಿಪೂರ್ಣ ಸಂಸ್ಕರಣೆ ಮಾಡುವುದರ ಮೂಲಕ ಮೌಲ್ಯವರ್ಧಿಸಿ ಮಾರುಕಟ್ಟೆ ಸೃಷ್ಟಿಸಿ ಲಾಭಗಳಿಸಲು ಸಾಧ್ಯವಿದೆ ಎಂದ ಗಾಂವ್ಕರ್ ಬಡವ-ಬಲ್ಲಿದ ಎಂಬ ಭೇಧವಿಲ್ಲದೇ ಕೇರಳದ ಶಿಕ್ಷಕ ಕುರಿಯನ್ ಗುಜರಾತಿನ ಆನಂದ್‌ನಲ್ಲಿ ಗ್ರಾಮೀಣಭಾಗದ ಅರ್ಥ ವ್ಯವಸ್ಥೆಯನ್ನು ಹಾಲು ಉತ್ಪಾದನೆಯ ಸಹಕಾರಿ ಸಂಘಗಳ ಮೂಲಕ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ ಹಾಲಿನ ಮೌಲ್ಯವರ್ಧಿಸಿ ವಿವಿಧ ಬಗೆಯಲ್ಲಿ ಆಹಾರಗಳನ್ನು (ಅಮೂಲ್ ಪ್ರಾಡೆಕ್ಟ್ಸ್)ತಯಾರಿಸಿ ಉತ್ತಮ ಮಾರುಕಟ್ಟೆ ಸೃಷ್ಟಿಸಿ ದೇಶ-ವಿದೇಶಗಳಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಇತ್ತೀಚಿಗೆ ರಾಷ್ಟ್ರಪ್ರಶಸ್ತಿಯನ್ನು ಪಡೆದು ಈಗ ಡಾ.ಕುರಿಯನ್ ವರ್ಗೀಸ್ ಆಗಿದ್ದಾರೆ. ಕೃಷಿ ಎಂದಿಗೂ ಲಾಭದಾಯಕವೇ ಆಗಿದ್ದು, ಅದನ್ನು ಯಾವರೀತಿಯಲ್ಲಿ ಅಳವಡಿಸಿಕೊಳ್ಳಬೇಕೆಂಬ ಬಗ್ಗೆ ರೈತರು ತಿಳಿದುಕೊಳ್ಳಬೇಕು. ರೈತರು ವಿವಿಧ ರೀತಿಯಲ್ಲಿ ಕೃಷಿಗಳನ್ನು ಮಾಡುವುದರಿಂದ ಲಾಭಗಳಿಸಲು ಸಹಕಾರಿಯಾಗುತ್ತದೆ ಎಂದು ಕೆಲವು ಘಟನೆಗಳನ್ನು ಉದಾಹರಿಸಿ ವಿವರಿಸಿದರು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೂಲು ಸಹಕಾರಿ ಸಪ್ತಾಹವನ್ನು ಉದ್ಘಾಟಿಸಿದರು. ದ.ಕಜಿ.ಸ. ಬ್ಯಾಂಕ್‌ನ ನಿರ್ದೇಶಕ ಬಿ. ರಘುರಾಮ ಶೆಟ್ಟಿ, ಜಿಲ್ಲಾ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಕುಂದಾಪುರ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ಚಂದ್ರಪ್ರತಿಮಾ, ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷ ದಿನಕರ ಶೆಟ್ಟಿ, ಉಪಾಧ್ಯಕ್ಷ ಗೋಪಾಲ ಶೆಟ್ಟಿ, ನಿರ್ದೇಶಕರಾದ ಜಿ.ಪಿ.ಮಹಮ್ಮದ್, ಸಂಜೀವ ಚಂದನ್, ಕುಂದಾಪುರ ಎಪಿಎಂಸಿ ನಿರ್ದೇಶಕ ಸುಬ್ರಾಯ ಹೆಗ್ಡೆ, ಹಿರಿಯ ಸಹಕಾರಿ ವಾಸುದೇವ ಯಡಿಯಾಳ್, ಖಂರೈಸೇಸ ಸಂಘದ ಸರ್ವ ನಿರ್ದೇಶಕರು ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

ಖಂರೈಸೇಸ ಸಂಘದ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೈ ಸ್ವಾಗತಿಸಿ, ವ್ಯವಸ್ಥಾಪಕ ಹಾವಳಿ ಬಿಲ್ಲವ ವಂದಿಸಿದರು. ನವೋದಯ ಸಂಘಗಳ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ ನಿರೂಪಿಸಿದರು. ನಂತರ ಭಾಗವತ ಸುರೇಶ್ ಶೆಟ್ಟಿ ಮತ್ತು ಬಳಗದ ಹಿಮ್ಮೇಳದಲ್ಲಿ ಕಲಾವಿದರಾದ ತೀರ್ಥಹಳ್ಳಿ ಗೋಪಾಲ ಆಚಾರ್ಯ, ಕ್ಯಾದಿಗೆ ಮಹಾಬಲೇಶ್ವರ ಭಟ್, ರವೀಂದ್ರ ದೇವಾಡಿಗ ಕಮಲಶಿಲೆ, ಉಮೇಶ, ವಿಜಯ ಗಾಣಿಗ ಬೀಜಮಕ್ಕಿ ಇವರಿಂದ ಚಂದ್ರಾವಳಿ ವಿಲಾಸ ಎಂಬ ಹಾಸ್ಯ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.

news Sahakari Saptaha3

Leave a Reply