ಜಪ್ತಿ: ದಿನಸಿ ಅಂಗಡಿಗೆ ಬೆಂಕಿ ತಗುಲಿ ರೂ. 2 ಲಕ್ಷಕ್ಕೂ ಅಧಿಕ ನಷ್ಟ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಜಪ್ತಿಯ ಸಮೀಪದ ರಸ್ತೆ ಬದಿಯಲ್ಲಿದ್ದ ತಗಡು ಶೀಟಿನ ಸಣ್ಣ ದಿನಸಿ ಅಂಗಡಿಗೆ ಬೆಂಕಿ ತಗುಲಿ ರೂ. 2ಲಕ್ಷಕ್ಕೂ ಅಧಿಕ ನಷ್ಟವಾದ ಘಟನೆ ನಡೆದಿದೆ..

Call us

Click Here

ಅಂಬಿಕಾ ಮತ್ತು ಅವರ ಪತಿ ನಡೆಸುತ್ತಿದ್ದ ದಿನಸಿ ಅಂಗಡಿಯಲ್ಲಿ ದಿನಸಿ ಸಾಮಗ್ರಿ, ತಿಂಡಿ, ಕೋಲ್ಡ್‌ ಡ್ರಿಂಕ್ಸ್‌, ತರಕಾರಿ ಇನ್ನಿತರ ಸಾಮಗ್ರಿಗಳಿದ್ದವು. ಅಂಗಡಿ ಮಾಲೀಕರು ರಾತ್ರಿ ಬಾಗಿಲು ಹಾಕಿ ಮನೆಗೆ ಹೋದ ಬಳಿಕ ರಾತ್ರಿ 10 ಗಂಟೆಗೆ ಸುಮಾರಿಗೆ ಬೆಂಕಿ ಬಿದ್ದಿದೆ. ಅಂಗಡಿ ಸಮೀಪದ ಮನೆಯ ಅಭಿ ಅವರು ಫೋನ್‌ ಮಾಡಿ ಅಂಗಡಿಗೆ ಬೆಂಕಿ ಬಿದ್ದಿರುವುದಾಗಿ ತಿಳಿಸಿದ್ದರು. ಅಕ್ಕಪಕ್ಕದವರು ಹಾಗೂ ಇತರರು ಸೇರಿ ನೀರು ಹಾಕಿ ಬೆಂಕಿ ನಂದಿಸಿದ್ದರೂ ಅಂಗಡಿಯಲ್ಲಿದ್ದ ಸೊತ್ತುಗಳು ಸುಟ್ಟು ಹೋಗಿವೆ.

ಬಳಿಕ ಪರಿಶೀಲಿಸಿದಾಗ ಅಂಗಡಿಯ ಹಿಂಬದಿಯ ತಗಡನ್ನು ಎತ್ತಿ ಒಳಗೆ ಬೆಂಕಿ ಹಾಕಿರುವುದು ಕಂಡು ಬಂದಿದೆ. ಫ್ರಿಜ್‌, ವಿವಿಧ ಎಣ್ಣೆಗಳ ಪೆಟ್ಟಿಗೆಗಳು ಹಾಗೂ ಪ್ರತಿನಿತ್ಯ ಮಾರಾಟಕ್ಕೆ ಇಟ್ಟಿದ್ದ ಸಾಮಗ್ರಿಗಳು ಸುಟ್ಟು ಹೋಗಿ ಅಂದಾಜು 2 ಲಕ್ಷ ರೂ. ನಷ್ಟ ಆಗಿದೆ.

ಇದೇ ಅಂಗಡಿಯ ಸಮೀಪ ಸಂದೇಶ ಅವರು 3 ವರ್ಷದ ಹಿಂದೆ ತಗಡಿನ ಅಂಗಡಿ ಇಟ್ಟಿದ್ದು, ನನ್ನ ಅಂಗಡಿಯ ಪಕ್ಕದಲ್ಲಿ ಅಂಗಡಿ ಇಡಲು ಎಷ್ಟು ಧೈರ್ಯ ಎಂದು ಅಂಬಿಕಾ ದಂಪತಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ರಾತ್ರಿ ಅಂಗಡಿಗೆ ಬೆಂಕಿ ಬಿದ್ದ ಸಂದರ್ಭ ಸಂದೇಶ ಮತ್ತು ಶಿವಪ್ರಸಾದ ಅವರು ಅಂಗಡಿಯ ಬಳಿ ತಿರುಗಾಡಿಕೊಂಡಿದ್ದರು.

Click here

Click here

Click here

Click Here

Call us

Call us

ಅಂಗಡಿಗೆ ವಿದ್ಯುತ್‌ ಸಂಪರ್ಕ ಇಲ್ಲ. ಇದ್ದಕ್ಕಿಂದತೆಯೇ ಬೆಂಕಿ ಹೊತ್ತಿಕೊಳ್ಳಲು ಸಾದ್ಯವಿಲ್ಲ ಅವರೇ ಬೆಂಕಿ ಹಾಕಿರಬಹುದು ಎಂದು ಶಂಕೆ ಇರುವುದಾಗಿ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ಅಂಗಡಿಯ ಮಾಲಕರು ತಿಳಿಸಿದ್ದಾರೆ.

Leave a Reply