ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ ಸಮಾರಂಭ ‘ಸಿದ್ಧಿ ಸೌರಭ-2024’ ಬಹಳ ವಿಜೃಂಭಣೆಯಿಂದ ನಡೆಯಿತು.
ಪೂರ್ವಾಹ್ನದ ಅವಧಿಯಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ, ರೂಪಕ ಮತ್ತು ಪ್ರಹಸನದಂತಹ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಪ್ರಾಥಮಿಕ ಶಾಲಾ ಸಹಶಿಕ್ಷಕಿ ವಿನಯಾ ಸ್ವಾಗತಿಸಿದರು. 5ನೇ ತರಗತಿಯ ವಿದ್ಯಾರ್ಥಿಗಳಾದ ಸುಶಾನ್, ನಿಯತಿ, ದಿಲ್ಶಾನ್, ಅಹನಾ, ವಿನೀಶ್, ಪ್ರಾರ್ಥನಾ, ಸೃಷ್ಠಿ, ಅಪೂರ್ವ, ಆರಾಧ್ಯ, ಶ್ರೇಯಾಂಕ್ ಮತ್ತು ಸಂಹಿತಾ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ಶಾಲಾ ಸಹಶಿಕ್ಷಕಿ ಗೀತಾ ಶೆಟ್ಟಿ ವಂದಿಸಿದರು.
ಸಂಜೆಯ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಸದಾರಾಮ್ ಸಂಸ್ಥೆ ನಡೆದು ಬಂದ ಹಾದಿ ಮತ್ತು ಇಲ್ಲಿನ ಶೈಕ್ಷಣಿಕ ಚಟುವಟಿಕೆಗಳು, ಪ್ರಸ್ತುತ ವರ್ಷದಲ್ಲಿ ಸಂಸ್ಥೆಗೆ ಸಂದ ಗೌರವ ಪುರಸ್ಕಾರಗಳು ಇತ್ಯಾದಿಗಳ ಕುರಿತಾದ ವಾರ್ಷಿಕ ವರದಿಯನ್ನು ವಾಚಿಸಿದರು. ಪ್ರಾಥಮಿಕ ಶಾಲಾ ಸಹಶಿಕ್ಷಕಿ ರೋಹಿಣಿ ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ರಮಾದೇವಿ ಭಟ್, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ವೇದಮೂರ್ತಿ ಹೆಚ್. ಬಾಲಚಂದ್ರ ಭಟ್, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ, ಉಪಪ್ರಾಂಶುಪಾಲ ರಾಮ ದೇವಾಡಿಗ, ಸರ್ವ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭರತನಾಟ್ಯ, ನೃತ್ಯ ರೂಪಕ, ನಾಟಕ, ಕನ್ನಡ-ಇಂಗ್ಲೀಷ್-ಹಿಂದಿ ಪ್ರಹಸನಗಳು, ಶ್ಯಾಡೋ ಶೋ, ಮೈಮ್ ಶೋ, ವಿಭಿನ್ನ ನೃತ್ಯಗಳು ಹಾಗೂ ‘ಜಯಂತ ಬಂಧನಎಂಬ ಯಕ್ಷಗಾನ ಕಾರ್ಯಕ್ರಮಗಳು ವೀಕ್ಷಕರ ಮನಸೂರೆಗೊಂಡವು. 10ನೇ ತರಗತಿಯ ವಿದ್ಯಾರ್ಥಿಗಳಾದ ಹಂಸಿತ್ ಶೆಟ್ಟಿ, ಅಭಿಷೇಕ್ ಶೆಟ್ಟಿ, ಸುಕೀರ್ತ್ ಶೆಟ್ಟಿ, ಆಯುಷ್, ವಿದ್ಯಾರ್ಥಿನಿಯರಾದ ನಿಧಿ ಶೆಟ್ಟಿ, ನೇಹಾ, ಆಯೆಷಾ ಯುಮ್ನಾ ಮತ್ತು ಸಮೀಕ್ಷಾ ಪೂಜಾರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.