ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ತಾಲೂಕು ಲಾರಿ ಮತ್ತು ಕೋರೆ ಮಾಲಕರ ಸಂಘದ ನೇತೃತ್ವದಲ್ಲಿ ಮರಳು & ಕೆಂಪುಕಲ್ಲು ಸಮಸ್ಯೆಗೆ ಸ್ಪಂದಿಸದ ಜಿಲ್ಲಾಡಳಿತದ ವಿರುದ್ಧ ಡಿಸೆಂಬರ್ 7ರ ಶನಿವಾರ ಬೆಳಿಗ್ಗೆ 9-30ಕ್ಕೆ ಬೈಂದೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೈಂದೂರು ಬೈಪಾಸ್‌ನಿಂದ ಪ್ರತಿಭಟನೆ ಹೊರಟು ತಾಲೂಕು ಆಡಳಿತ ಸೌಧದ ಎದುರು ಸೇರಿ ಪ್ರತಿಭಟನೆ ನಡೆಸಿ ಬಳಿಕ ಬೈಂದೂರು ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಗುವುದು. ಈ ವೇಳೆ ಲಾರಿ ಮತ್ತು ಕೋರೆ ಮಾಲಕರ ಸಂಘದ ಸದಸ್ಯರು, ಕಟ್ಟಡ ಕಾರ್ಮಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದು 5 ವರ್ಷದ ಹಿಂದೆ 3A ಅಡಿಯಲ್ಲಿ ಕೃಷಿ ಅಭಿವೃದ್ಧಿ ಮತ್ತು ಮನೆ ನಿರ್ಮಾಣಕ್ಕೆ ಕೆಂಪು ಕಲ್ಲು ಶಿಲೆ ಕಲ್ಲು ತೆಗೆದು ಸಾಗಾಟ ಮಾಡಲು ಪರವಾನಿಗೆ ನೀಡಲಾಗಿದೆ. ಪ್ರಸ್ತುತ ಕಳೆದ ಒಂದುವರೆ ವರ್ಷದಿಂದ ಯಾವುದೋ ಕಾರಣ ನೀಡಿ ಪರವಾನಿಗೆಗಳನ್ನು ರದ್ದು ಮಾಡಲಾಗಿದೆ. ಈ ಒಂದು ವರ್ಷದ ಹಿಂದೆ ಇದರ ಸಲುವಾಗಿ ಉಡುಪಿ ಜಿಲ್ಲೆಯಾದ್ಯಂತ ನಾವು ರಸ್ತೆ ಇಳಿದು ಪ್ರತಿಭಟನೆ ನಡೆಸಿದಾಗ ನೀವು ನಮಗೆ 3AB ಅಡಿಯಲ್ಲಿ ಭೂಮಿಯನ್ನು ಸಮತಟ್ಟು ಮಾಡಿಕೊಂಡು ಅದರಲ್ಲಿರುವ ಕಟ್ಟಡ ಸಾಮಾಗ್ರಿಗಳನ್ನು ಉಪಯೋಗಿಸಬಹುದೆಂದು ನಮಗೆ ತಾತ್ಕಾಲಿಕವಾಗಿ ಪರವಾನಿಗೆ ನೀಡಲಾಗಿದೆ. ಆ ಪರವಾನಿಗೆಯಲ್ಲಿ ಕೆಂಪು ಕಲ್ಲು ತೆಗೆಯುವ ಬಗ್ಗೆ ಯಾವುದೇ ಉಲ್ಲೇಖ ಇರುವುದಿಲ್ಲ. ಪ್ರಸ್ತುತ ಆ ಪರವಾನಿಗೆ ಅಡಿಯಲ್ಲಿ ಕೆಂಪು ಕಲ್ಲು ತೆಗೆದಿದ್ದರಿಂದ ಇಲಾಖೆ ಮೇಲೆ ಲೋಕಯುಕ್ತ ಪ್ರಕರಣ ದಾಖಲಿಸಿದ್ದಾರೆ. ಆದ್ದರಿಂದ ಉಡುಪಿ ಜಿಲ್ಲೆಯಲ್ಲಿಯೇ ಯಾರು ಕೆಂಪು ಕಲ್ಲು ತೆಗೆಯಲು ಹಾಗೂ ಸಾಗಾಟ ಮಾಡಲು ಅನುಮತಿ ನೀಡುವುದಿಲ್ಲವೆಂದು ಮಾನ್ಯ ಜಿಲ್ಲಾಧಿಕಾರಿಗಳು ಆದೇಶ ಮಾಡಿರುತ್ತಾರೆ. 2 ತಿಂಗಳಿನಿಂದ ಜಿಲ್ಲಾ ಆಡಳಿತ ಮತ್ತು ಸರಕಾರ ನಮಗೆ ಕೆಲಸ ನಿರ್ವಹಿಸಲು ಯಾವುದೇ ಸವಲತ್ತು ನೀಡದೆ 3A ರದ್ದತಿ ಮಾಡಿ ಉಡುಪಿ ಜಿಲ್ಲೆಯಲ್ಲಿ ಮಾತ್ರ ಕೆಂಪು ಕಲ್ಲು ಹಾಗೂ ಶಿಲೆ ಕಲ್ಲು ತೆಗೆಯಲು ನಿರ್ಬಂಧ ವಿಧಿಸಿರುತ್ತೀರಿ. ಮತ್ತೇ ಉಳಿದ ಎಲ್ಲಾ ಜಿಲ್ಲೆಗಳಲ್ಲೂ ನಿರಂತರವಾಗಿ ಕೆಂಪು ಕಲ್ಲು ಶಿಲೆ ಕಲ್ಲು ಸಾಗಾಟ ಮಾಡಲು ಯಾವುದೇ ತೊಂದರೆ ಇರುವುದಿಲ್ಲ. ನೀವು ಉದ್ದೇಶ ಪೂರ್ವಕವಗಿ ಉಡುಪಿ ಜಿಲ್ಲೆಗೆ ತೊಂದರೆ ನೀಡುತ್ತೀದ್ದಿರಿ.
ಈ ಬಗ್ಗೆ ಈವರಗೆ ಸರಕಾರದ ಇಲಾಖೆಗಳಿಗೆ ಮತ್ತು ಎಲ್ಲಾ ಜನ ಪ್ರತಿನಿಧಿಗಳಿಗೆ ಸಾರ್ವಜನಿಕರು ಅನಿಭವಿಸುತ್ತಿರುವ ತೊಂದರೆಯನ್ನು ತೀಳಿಸಿದ್ದರು ಸಹ ಏನು ಪ್ರಯೋಜನವಾಗಿಲ್ಲ.