ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಸ್ರೂರಿನಲ್ಲಿ ಬಾಡಿಗೆಗೆ ನೀಡಿದ್ದ ಮನೆಯೊಂದರಲ್ಲಿ ಕಳ್ಳತನ ನಡೆದಿದೆ.
ಇಲ್ಲಿನ ನಿವಾಸಿ ರವಿ ತನ್ನ ತಾಯಿ ಮನೆಯನ್ನು ಮೂರು ತಿಂಗಳ ಹಿಂದೆ ಆವರ್ಸೆ ನಿವಾಸಿ ಸಂತೋಷ್ ಎಂಬವರಿಗೆ ವಾಸವಿರಲು ನೀಡಿದ್ದು ಆತ 2 ತಿಂಗಳ ಬಾಡಿಗೆ ಹಣ ನೀಡಲು ಬಾಕಿಯಿತ್ತು.
ಡಿ.2ರಂದು ಸಂಜೆ ಬಾಡಿಗೆ ಕೇಳಲು ಬಂದ ವೇಳೆ ಮನೆಗೆ ಬೀಗ ಹಾಕಿತ್ತು. ಗುರುವಾರ ಬಾಡಿಗೆ ಕೇಳಲೆಂದು ಬಂದ ವೇಳೆಯೂ ಬಾಗಿಲು ಹಾಕಿದ್ದರಿಂದ ಅನುಮಾನಗೊಂಡು ಮನೆಯ ಹಿಂಬದಿಯ ಬಾಗಿಲು ತೆರೆದು ನೋಡುವಾಗ 1.04 ಲಕ್ಷ ರೂ. ಮೌಲ್ಯದ ಸೊತ್ತುಗಳು ಕಳವು ಆಗಿತ್ತು. ಬಾಡಿಗೆಗೆ ಇದ್ದ ಸಂತೋಷ್ ಸೊತ್ತುಗಳನ್ನು ಕಳವು ಮಾಡಿರುವ ಸಂಶಯವಿದೆ ಎಂದು ಮನೆಯ ಮಾಲೀಕ ರವಿ ನೀಡಿದ ದೂರಿನಂತೆ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.