ಡಿ.16ರಿಂದ 3 ದಿನಗಳ ಕಾಲ ಸಂಚಲನ ಹೊಸೂರು ಆಶ್ರಯದಲ್ಲಿ ರಂಗ ಸಂಚಲನ -2024

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಹೊಸೂರು ಸಂಚಲನ ಆಶ್ರಯದಲ್ಲಿ 3 ದಿನಗಳ ರಾಜ್ಯಮಟ್ಟದ ನಾಟಕೋತ್ಸವ, ವನಸಿರಿಯಲ್ಲೊಂದು ರಂಗ ಸುಗ್ಗಿ ರಂಗ ಸಂಚಲನ 2024 ಕಾರ್ಯಕ್ರಮವು  ಡಿ.16ರಿಂದ 18ರ ತೂದಳ್ಳಿ ಹೊಸೂರಿನ ಕೆ.ವಿ ಸುಬ್ಬಣ್ಣ ವನರಂಗದಲ್ಲಿ ಪ್ರತಿದಿನ ಸಂಜೆ 7-ಕ್ಕೆ ನಡೆಯಲಿದೆ ಎಂದು ಸಂಚಲನ ಹೊಸೂರು ಖಜಾಂಜಿ ನಾಗಪ್ಪ ಮರಾಠಿ ಹೇಳಿದರು.

Call us

Click Here

ಅವರು ಬೈಂದೂರು ಪ್ರೆಸ್‍ ಕ್ಲಬ್‍ನಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ 16 ವರ್ಷದಿಂದ ಪರಿಶಿಷ್ಠ ಪಂಗಡದ ಮರಾಠಿ ಕಲಾವಿದರ ರಂಗ ತಂಡವಾಗಿರುವ ಸಂಚಲನ ರಿ. ಹೊಸೂರು ಮೂಲಕ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಟಕೋತ್ಸವವನ್ನು ಆಯೋಜಿಸುತ್ತಾ ಬರಲಾಗುತ್ತಿದ್ದು ಈ ವರ್ಷವು 3 ದಿನಗಳ ಕಾಲ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಡಿ.16ರಂದು ನಡೆಯುವ  ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ವಹಿಸಲಿದ್ದಾರೆ. ಗಂಗೊಳ್ಳಿ ಎಸ್.ವಿ ಕಾಲೇಜಿನ ಉಪನ್ಯಾಸಕರಾದ ಸುಜಯೀಂದ್ರ ಹಂದೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೈಂದೂರು ವಲಯ ಮರಾಟಿ ಸಮಾಜ ಸುಧಾರಕರ ಸಂಘದ ಅಧ್ಯಕ್ಷರಾದ ಭೋಜ ನಾಯ್ಕ ಶುಭ ಶಂಸನೆ ಮಾಡಲಿದ್ದಾರೆ. ಅಂದು ನಾಟಿ ವೈದ್ಯರಾದ ಮಂಜ ಮರಾಠಿ ಗಂಗನಾಡು ಅವರಿಗೆ ಸನ್ಮಾನಿಸಲಾಗುತ್ತದೆ.

ಡಿ.17ರಂದು ನಡೆಯುವ ಕಾರ್ಯಕ್ರಮದಲ್ಲಿ  ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ. ಬಾಬು ಶೆಟ್ಟಿ ಅವರು ಅಧ‍್ಯಕ್ಷತೆ ವಹಿಸಲಿದ್ದಾರೆ.ಅಂದು ಸಮಾಜಸೇವಕ ಲಿಜೋ ಇ.ಜೆ ಅಂಬಿಕಾನ್‍ ಅವರಿಗೆ ಸನ್ಮಾನಿಸಲಾಗುತ್ತದೆ

ಡಿ.18ರಂದು ನಡೆಯುವ ಕಾರ್ಯಕ್ರಮದಲ್ಲಿ  ಬೈಂದೂರು ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ಪಂ ಮಾಜಿ ಅಧ್ಯಕ್ಷರಾದ ಎಸ್‍. ರಾಜು ಪೂಜಾರಿ ಸಮಾರೋಪ ನುಡಿಗಳಾನ್ನಾಡಲಿದ್ದಾರೆ.

Click here

Click here

Click here

Click Here

Call us

Call us

ಅಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಹಾಲಿಂಗ ನಾಯ್ಕ್‌ ಅವರಿಗೆ ಸನ್ಮಾನಿಸಲಾಗುತ್ತದೆ.

ಡಿ.16ರಂದು ಸಂಗಮ್‍ ಕಲಾವಿದೆರ್ ಮಣಿಪಾಲ್‍ ಇವರಿಂದ ಮೃತ್ಯಂಜಯ ನಾಟಕ ಪ್ರದರ್ಶನಗೊಳ್ಳಲಿದೆ. ಡಿ.17ರಂದು ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇವರಿಂದ ಬಿಡುವನೇ ಬ್ರಹ್ಮಲಿಂಗ ನೃತ್ಯ ರೂಪಕ ಹಾಗೂ ಇತರ ನೃತ್ಯಗಳು ಪ್ರದರ್ಶನಗೊಳ್ಳಲಿದೆ. ಡಿ.18ರಂದು ಸುರಭಿ ರಿ. ಬೈಂದೂರು ಬಾಲಕಲಾವಿದರಿಂದ ಅಭಿಮನ್ಯು ಕಾಳಗ ಯಕ್ಷಗಾನ  ಪ್ರದರ್ಶನಗೊಳ್ಳಲಿದೆ.

ಮಾಧ್ಯಮಗೋಷ್ಠಿಯಲ್ಲಿ ಅಧ್ಯಕ್ಷರಾದ ಮಹಾದೇವ ಮರಾಠಿ, ಉಪಾಧ್ಯಕ್ಷರುಗಳಾದ ನಾರಾಯಣ ಮರಾಠಿ, ದಯಾನಂದ ಮರಾಠಿ, ಕಾರ್ಯದರ್ಶಿ ರಾಜು ಮರಾಠಿ, ಸಂಸ್ಥೆಯ ಮಾರ್ಗದರ್ಶಕ ಸುಧಾಕರ್ ಪಿ. ಉಪಸ್ಥಿತರಿದ್ದರು.

Leave a Reply