ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ಇದರ ವತಿಯಿಂದ ಗಂಗೊಳ್ಳಿಯ ಆಶ್ರಯ ಹೊಲಿಗೆ ತರಬೇತಿ ಕೇಂದ್ರದ ಸಹಯೋಗದಲ್ಲಿ ಕಸೂತಿ ವಿನ್ಯಾಸದ ತರಬೇತಿ ಕಾರ್ಯಕ್ರಮವು ಗಂಗೊಳ್ಳಿ ಆಶ್ರಯ ಹೊಲಿಗೆ ತರಬೇತಿ ಕೇಂದ್ರದಲ್ಲಿ ನಡೆಯಿತು.
ನಿವೃತ್ತ ಮುಖ್ಯೋಪಾಧ್ಯಾಯಿನಿ ಸುಮನಾ ಪಡಿಯಾರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಆಶ್ರಯ ಹೊಲಿಗೆ ತರಬೇತಿ ಕೇಂದ್ರದ ಶಿಕ್ಷಕಿ ಶಾಂತಿ ಖಾರ್ವಿ, ಸಂಪನ್ಮೂಲ ವ್ಯಕ್ತಿ ರಮ್ಯ ಹಾಗೂ ತರಬೇತಿ ನೀಡಲು ಸ್ಥಳಾವಕಾಶ ನೀಡಿದ ಸುಜಾತಾ ಬಿ. ಖಾರ್ವಿ ಉಪಸ್ಥಿತರಿದ್ದರು.
ಸುಮಾರು 37 ಶಿಬಿರಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಚಂದ್ರಕಲಾ ತಾಂಡೇಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಮಾಲಾಶ್ರೀ ಖಾರ್ವಿ ವಂದಿಸಿದರು.















