ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಏಕಾಹ ಅಖಂಡ ಭಜನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಆರಂಭವಾಯಿತು.
ಬೆಳಿಗ್ಗೆ ದೇವತಾ ಪ್ರಾರ್ಥನೆ ಬಳಿಕ ಏಕಾಹ ಭಜನೆ ದೀಪ ಸ್ಥಾಪನೆಯ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಜಿ. ಮೋಹನದಾಸ ಭಟ್, ಜಿ. ಪ್ರದೀಪ ಭಟ್ ಮತ್ತು ತಾಂತ್ರಿಕ ಜಿ. ರಾಘವೇಂದ್ರ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ಅನುಷ್ಠಾನಗಳು ಜರಗಿತು.
ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಜಿ. ರಾಧಾಕೃಷ್ಣ ನಾಯಕ್ ದೀಪ ಪ್ರಜ್ವಲನೆ ಮಾಡಿ ಏಕಾಹ ಭಜನೆಗೆ ಚಾಲನೆ ನೀಡಿದರು.
ಮಧ್ಯಾಹ್ನ ಶ್ರೀ ದೇವರಿಗೆ ವಿಶೇಷ ಪೂಜೆ, ವಿರಾಟರೂಪ ದರ್ಶನ, ಸಂಜೆ ಮಕ್ಕಳ ಉತ್ಸವ ಮತ್ತಿತರ ಕಾರ್ಯಕ್ರಮಗಳು ನಡೆಯಿತು.
ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಡಾ. ಕಾಶೀನಾಥ ಪೈ, ಜಿ. ಗೋವಿಂದ್ರಾಯ ಆಚಾರ್ಯ, ಯು. ಸುರೇಶ ಪೈ, ಬಿ. ವಾಸುದೇವ ಪಡಿಯಾರ್, ಜಿ. ರಾಮಚಂದ್ರ ಪೈ, ಬಿ. ರಾಘವೇಂದ್ರ ಪೈ, ದೇವಸ್ಥಾನದ ವ್ಯವಸ್ಥಾಪಕ ಟಿ. ಶ್ರೀಕರ ಶೆಣೈ, ಜಿ. ಸಂದೀಪ ನಾಯಕ್, ಜಿ. ಮಾಧವ ಪೈ, ಜಿ. ಶ್ರೀನಾಥ ಭಟ್ ಮತ್ತಿತರರು ಉಪಸ್ಥಿತರಿದ್ದರು. ಡಿ.12ರಂದು ಬೆಳಿಗ್ಗೆ ಮುಕ್ಕೋಟಿ ಉತ್ಸವ, ದೀಪ ವಿಸರ್ಜನೆ, ಮಧ್ಯಾಹ್ನ ಪೂಜೆ, ಸಂಜೆ ಪಲ್ಲಕಿ ಉತ್ಸವ ನಡೆಯಲಿದೆ.