ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಥೈಲ್ಯಾಂಡ್ ಯೂತ್ ಯೋಗ ಅಸೋಸಿಯೇಷನ್ ಮತ್ತು ವರ್ಲ್ಡ್ ಯೂಥ್ ಯೋಗ ಫೆಡರೇಶನ್ ಹಾಗೂ ವರ್ಷಿಣಿ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ ರಿ. ಶಿವಮೊಗ್ಗ ಕರ್ನಾಟಕ ಇವರ ಸಹಭಾಗಿತ್ವದಲ್ಲಿ ಸೋಮವಾರ ಥೈಲ್ಯಾಂಡ್ ದೇಶದ ಪಟ್ಟಾಯದಲ್ಲಿ 6ನೇ ವರ್ಷದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯು ನಡೆಯಿತು.

ಈ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಏಳು ದೇಶಗಳ ಸ್ಪರ್ಧಿಗಳಲ್ಲಿ ಸುಮಾರು 80 ಜನ ಸ್ಪರ್ಧಿಗಳು ಭಾಗವಹಿಸಿದ್ದರು. ಇವರ ಜೊತೆ ಭಾರತ ದೇಶದಿಂದ 11 ರಿಂದ 15 ವರ್ಷದ ವಯಸ್ಸಿನ ವಿಭಾಗದಲ್ಲಿ ಪ್ರತಿನಿಧಿಸಿದ ಧನ್ವಿ ಪೂಜಾರಿ ಮರವಂತೆ ಅವರು ಭಾರತ ದೇಶಕ್ಕೆ ಚಿನ್ನದ ಪದಕ ಪಡೆದು ಪ್ರಥಮ ಸ್ಥಾನ ಪಡೆದಿರುತ್ತಾಳೆ.
ಧನ್ವಿ ಹೆಮ್ಮಾಡಿಯ ಜನತಾ ಇಂಡಿಪೆಂಡೆಂಟ್ ಪಿ ಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಪ್ರಥಮ ಪಿ ಯು ಸಿ ಯಲ್ಲಿ ಕಲಿಯುತ್ತಿದ್ದಾಳೆ. ಈಕೆ ಮರವಂತೆಯ ಶಿವಾ ಮಾಸ್ತಿ ಮನೆ ಹಾಗೂ ಜ್ಯೋತಿ ಚಂದ್ರ ಶೇಖರ್ ಅವರ ಪುತ್ರಿ.










