ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಿ. ಸಭೆಯು ರಾಜ್ಯ ಸಮಿತಿಯ ಸದಸ್ಯರು ಜಯನ್ ಮಲ್ಪೆ, ಹಾಗೂ ಜಿಲ್ಲಾ ಸಮಿತಿಯ ಸಂಚಾಲಕರಾದ ವಾಸುದೇವ ಮುದೂರು ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಎಲ್ಲಾ ದಲಿತ ಮುಖಂಡರು ಹಾಗೂ ದಲಿತ ಸಮುದಾಯದ ಒಪ್ಪಿಗೆ ಮೇರೆಗೆ ಲಕ್ಷ್ಮಣ್ ಬೈಂದೂರು ಅವರನ್ನು ಅವಿರೋಧವಾಗಿ ಕರ್ನಾಟಕ ದಲಿತ ಸಂಘರ್ಷ ರಿ. ಸಮಿತಿ ತಾಲ್ಲೂಕು ಸಂಚಾಲಕರಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ದಲಿತ ಮುಖಂಡರಾದ ಜಯನ್ ಮಲ್ಪೆ, ವಾಸುದೇವ ಮುದೂರು, ಅಂಬೇಡ್ಕರ್ ಯುವ ಸೇನಾ ಜಿಲ್ಲಾಧ್ಯಕ್ಷರು ಹರೀಶ್ ಸಾಲ್ಯಾನ್ ಮಲ್ಪೆ, ಶಿವರಾಮ್ ಹಳಗೇರಿ, ಚಂದ್ರ ಹಳಗೇರಿ, ಹಿರಿಯ ಹೋರಾಟಗಾರ ಮುಡೂರು ಮಾಸ್ಟರ್ ಅಂಬಾಗಿಲು, ಸುಂದರ ಬಾಬು ನೈಕನಕಟ್ಟೆ, ಅಣ್ಣಪ್ಪ ಯೋಜನಾನಗರ, ಭಾಸ್ಕರ್ ನಾಯ್ಕ್ ಮೂಡುಬಗೆ, ರವೀಂದ್ರ ಬೆಳ್ಳಾರೆ, ಯುವಸೇನೆ ಅಧ್ಯಕ್ಷರಾದ ರಾಮ ಮಯ್ಯಾಡಿ, ಮಂಜುನಾಥ್ ಡಿಸಿಬಿ ಅಧಿದ್ರಾವಿಡ ಸಂಘಟನೆಯ ಮುಖಂಡರು ಮತ್ತಿತರು ಯುವ ನಾಯಕರು ಉಪಸ್ಥಿತರಿದ್ದರು.










