ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರಿನಲ್ಲಿ ಮೊದಲ ಭಾರಿಗೆ ನೂತನ ಮಾದರಿಯ ಬಸ್ಸುಗಳನ್ನು ಪರಿಚಯಿಸಿದ ಏರೋ ಬಸ್ (Aero bus) ಸಂಸ್ಥೆ ಇದೀಗ ಹೊಸತಾಗಿ ನಾಲ್ಕು ಬಸ್ಸುಗಳನ್ನು ಗ್ರಾಹಕರ ಸೇವೆಗೆ ಒದಗಿಸಿಕೊಟ್ಟಿದೆ. ಬಸ್ಸಿನಲ್ಲಿ ಶೌಚಾಲಯ ಸಹಿತ ಸೇವೆ ಹೊಂದಿದ್ದು ಗ್ರಾಹಕರಿಗೆ ಅನುಕೂಲಕರವಾಗಿದೆ. ಏರೋ ಬಸ್ ಸಂಸ್ಥೆಯು ಆರಂಭಗೊಂಡು ಒಂದು ವರ್ಷದಲ್ಲೇ ಉದ್ಯಮ ವಿಸ್ತರಿಸಿಕೊಂಡಿದ್ದು, ಒಟ್ಟು ಆರು ಬಸ್ಸುಗಳು ಬೈಂದೂರು – ಬೆಂಗಳೂರು ಮಾರ್ಗದಲ್ಲಿ ಕಾರ್ಯಾಚರಿಸಲಿದೆ.

ನೂತನ ಬಸ್ಸುಗಳನ್ನು ಲೋಕಾರ್ಪಣೆಗೊಳಿಸಿದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಬೈಂದೂರು ಪ್ರವಾಸೋದ್ಯಮ ಅಭಿವೃದ್ಧಿಗೆ ವಿವಿಧ ಯೋಜನೆಗಳು ಜಾರಿಯಲ್ಲಿರುವಾಗ ಯುವ ಉದ್ಯಮಿಗಳಿಬ್ಬರು ಜೊತೆಗೂಡಿ ಹೊಸ ಮಾದರಿಯ ಬಸ್ ಸೇವೆ ಆರಂಭಿಸಿದ್ದಾರೆ. ಬೆಂಗಳೂರು – ಬೈಂದೂರು ಸಂಪರ್ಕಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಟೂರ್ ಪ್ಯಾಕೇಜ್ ಆರಂಭಿಸುವ ಯೋಜನೆ ಹೊಂದಿರುವುದು ಶ್ಲಾಘನೀಯ ಎಂದರು.
ಈ ವೇಳೆ ಏರೋ ಬಸ್ ಸಂಸ್ಥೆಯ ಪಾಲುದಾರರಾದ ಕಿಶನ್ ಬೈಂದೂರು, ಜಿತೇಶ್ ಪೂಜಾರಿ ಬೆಳಗಾವಿಯ ಎಂ.ಜಿ ಆಟೋಮೋಟಿವ್ ಆಪರೇಷನ್ ಹೆಡ್ ಪ್ರಕಾಶ್ ವರ್ಮಾ, ಆಪರೇಷನ್ ಮ್ಯಾನೇಜರ್ ಅಫ್ನಾನ್, ಅನುರಾಧ ಗುರುರಾಜ್ ಮೊದಲಾದವರು ಉಪಸ್ಥಿತರಿದ್ದರು.










