ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಡಿ.13: ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತಿಗೆ ಡಿ.10ರಂದು ನಡೆದ ಚುನಾವಣೆಯ ಫಲಿತಾಂಶವು ಗುರುವಾರ ರಾತ್ರಿ ಹೊರಬಿದ್ದಿದ್ದು ಕಾಂಗ್ರೆಸ್ – ಎಸ್‌ಡಿಪಿಐ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಒಟ್ಟು 33 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12, ಎಸ್‌ಡಿಪಿಐ ಬೆಂಬಲಿತ 7, ಬಿಜೆಪಿ ಬೆಂಬಲಿತ 12 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ – ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳ ಚುನಾವಣಾ ಮೈತ್ರಿ ಇದ್ದುದರಿಂದ ಒಂದೂವರೆ ದಶಕದ ಬಳಿಕ ಕಾಂಗ್ರೆಸ್ ಬೆಂಬಲಿತರು ಗಂಗೊಳ್ಳಿ ಗ್ರಾಮ ಪಂಚಾಯತಿಯ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.


ಗಂಗೊಳ್ಳಿಯ ಒಟ್ಟು 8 ವಾರ್ಡ್‌ಗಳಲ್ಲಿ 1ನೇ ವಾರ್ಡಿನ ಒಟ್ಟು ಐದು ಸ್ಥಾನಗಳಲ್ಲಿ ಗುರುರಾಜ, ರೇಖಾ ಖಾರ್ವಿ ಸರೋಜಕೃಷ್ಣ ಪೂಜಾರಿ, ನಾಗರಾಜ ಖಾರ್ವಿ, ನಾಗರತ್ನ ಶೇರುಗಾರ್ ಗೆಲುವು ಸಾಧಿಸಿದ್ದಾರೆ. 2ನೇ ವಾರ್ಡಿನಲ್ಲಿ ತಬ್ರರೈಸ್, ಶರೀನಾ, ಅಬೂಬಕ್ಕರ್ ನಾಕುದಾ ಹಾಗೂ ರಜಬ್ ಗೆಲುವು ಸಾಧಿಸಿದ್ದಾರೆ. 3ನೇ ವಾರ್ಡಿನಲ್ಲಿ ದೀಪಾ, ಗೋಪಾಲ್ ಖಾರ್ವಿ, ಮಮತಾ ಎಸ್ ಗಾಣಿಗ, ಶ್ಯಾಮಲ ಶೆಡ್ತಿ ಗೆಲುವು ಸಾಧಿಸಿದರೆ 4ನೇ ವಾರ್ಡಿನಲ್ಲಿ ಮಹೇಶ್, ಅಮ್ಮು ಮೊಗೇರ್ತಿ, ಶೋಭಾ ಕೃಷ್ಣ ಬಿಲ್ಲವ, ದೇವೇಂದ್ರ ಖಾರ್ವಿ ಗೆಲುವು ಸಾಧಿಸಿದ್ದಾರೆ. 5ನೇ ವಾರ್ಡಿನಲ್ಲಿ ಲಕ್ಷ್ಮಿಪೂಜಾರಿ, ಜನ್ನಿ ಖಾರ್ವಿ, ಗಣೇಶ್ ಪೂಜಾರಿ, ಜಯೇಂದ್ರ ಖಾರ್ವಿ ಗೆಲುವು ಸಾಧಿಸಿದ್ದಾರೆ. 6ನೇ ವಾರ್ಡಿನಲ್ಲಿ ಮಂಜುಳಾ ದೇವಾಡಿಗ, ಮ್ಯಾಕ್ಸಿಮ್ ಆಲ್ಬರ್ಟ್, ಫೆರ್ನಾಂಡಿಸ್, ಮೊಮಿನ್ ಸಮೀರ್ ಅಹ್ಮದ್ ಗೆಲುವು ಸಾಧಿಸಿದ್ದಾರೆ. 7ನೇ ವಾರ್ಡಿನಲ್ಲಿ ಸುರೇಖಾ ಕಾನೋಜಿ, ಶ್ರೀನಾಥ್ ಖಾರ್ವಿ, ರಿಯಾಜ್ ಅಹ್ಮದ್ ಹಾಗೂ 8ನೇ ವಾರ್ಡಿನಲ್ಲಿ ಚಂದ್ರ ಖಾರ್ವಿ, ಅಕ್ಕಮ್ಮ ಯು ಕುಮಾರ್, ಅಶ್ವಿನಿ ಖಾರ್ವಿ, ರಾಜೇಂದ್ರ ಗೆಲುವಿನ ನಗೆ ಬೀರಿದ್ದಾರೆ. ಕುಂದಾಪ್ರ ಡಾಟ್ ಕಾಂ
ಗಂಗೊಳ್ಳಿ ಗ್ರಾಮ ಪಂಚಾಯತಿಯ ಅಧಿಕಾರದ ಗದ್ದುಗೆ ಹಿಡಿಯಲು ಒಟ್ಟು 17 ಸ್ಥಾನಗಳು ಅಗತ್ಯವಿದ್ದು, ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಜೊತೆಯಾಗಿ ಸೆಣಸಾಡಿ ಒಟ್ಟು 19 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ ಹಾಗೂ ಎಸ್‌ಡಿಪಿಐ ಬೆಂಬಲಿತರು ಉಪಾಧ್ಯಕ್ಷರಾಗುವ ಸಾಧ್ಯತೆ ಇದೆ. ಗಂಗೊಳ್ಳಿ ಪಂಚಾಯತ್ ಕಳೆದ 15 ವರ್ಷಗಳಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪಾಲಾಗುತ್ತಿತ್ತು. ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಬೆಂಬಲಿತರು ಒಟ್ಟಾಗಿ ಚುನಾವಣೆ ಎದುರಿಸಿದ್ದು ಅವರ ಗೆಲುವಿಗೆ ದಾರಿಮಾಡಿಕೊಟ್ಟರೇ, ಬಿಜೆಪಿಯ ಬಣ ರಾಜಕೀಯ, ಹಿರಿಯರು ಹಾಗೂ ಹಿಂದಿನ ಅಭ್ಯರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಅವರಿಗೆ ಮುಳುವಾಯಿತು. /ಕುಂದಾಪ್ರ ಡಾಟ್ ಕಾಂ/










