ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ‘ಮಕ್ಕಳ ಸಂತೆ’ ಬಿಜಿನೆಸ್ ಡೇ ಕಾರ್ಯಕ್ರಮ ಮತ್ತು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಶ್ರಯದಲ್ಲಿ ವಿಜ್ಞಾನ ಮಾದರಿ ಪ್ರದರ್ಶನ ಮತ್ತು ಸ್ಪರ್ಧೆ ಕಾರ್ಯಕ್ರಮ ಗಂಗೊಳ್ಳಿಯ ಎಸ್.ವಿ. ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಗುರುವಾರ ನಡೆಯಿತು.
ಗಂಗೊಳ್ಳಿಯ ಉದ್ಯಮಿ ವಿನೋದ್ ಪೈ ಮಕ್ಕಳ ಸಂತೆಯನ್ನು ಮತ್ತು ಗಂಗೊಳ್ಳಿ ಕ್ಲಸ್ಟರ್‌ನ ಸಿಆರ್‌ಪಿ ಪ್ರದೀಪ್ ಕುಮಾರ್ ಶೆಟ್ಟಿ ವಿಜ್ಞಾನ ಮಾದರಿ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಗಂಗೊಳ್ಳಿಯ ವಿವಿಧ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಾದ ಗೋಪಾಲ ದೇವಾಡಿಗ, ರಾಘವೇಂದ್ರ ಶೇರುಗಾರ್, ಭಗಿನಿ ಕ್ರೆಸೆನ್ಸ್, ಸಭಾ ಭಾನು ಮತ್ತು ಸುಮಯ್ಯ ಮಕ್ಕಳ ಸಂತೆಯ ವಿವಿಧ ಮಳಿಗೆಗಳನ್ನು ಉದ್ಘಾಟಿಸಿದರು.
ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ. ಸಿ. ಅಧ್ಯಕ್ಷತೆ ವಹಿಸಿದ್ದಾರೆ. ಜಿಎಸ್‌ವಿಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶೀನಾಥ್ ಪೈ, ಕಾರ್ಯದರ್ಶಿ ಎಚ್. ಗಣೇಶ ಕಾಮತ್, ಸಂಚಾಲಕ ಎನ್. ಸದಾಶಿವ ನಾಯಕ್, ಸದಸ್ಯರಾದ ಕೆ. ರಾಮನಾಥ ನಾಯಕ್, ಎಂ. ನಾಗೇಂದ್ರ ಪೈ, ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಜಿ. ವಿಠಲ ಶೆಣೈ, ಪತ್ರಕರ್ತ ಬಿ. ರಾಘವೇಂದ್ರ ಪೈ, ಉಪನ್ಯಾಸಕರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ಗೋಪಾಲ ದೇವಾಡಿಗ, ರಾಘವೇಂದ್ರ ಶೇರುಗಾರ್, ಭಗಿನಿ ಕ್ರೆಸೆನ್ಸ್, ಸಭಾ ಭಾನು ಮತ್ತು ಸುಮಯ್ಯ ಹಾಗೂ ಎಂ. ವಿನೋದ ಪೈ ಅವರನ್ನು ಗೌರವಿಸಲಾಯಿತು.
ಮಕ್ಕಳ ಸಂತೆಯಲ್ಲಿ ಭೂತದ ಮನೆ, ಫುಡ್ ಜೋನ್, ವಿ. ಆರ್ ಎಫೆಕ್ಟ್, ಬಟ್ಟೆ ಮಳಿಗೆಗಳು ವಿಶೇಷ ಆಕರ್ಷಣೆಯಾಗಿತ್ತು, ವಿಜ್ಞಾನ ಮಾದರಿ ಪ್ರದರ್ಶನ ಮತ್ತು ಸ್ಪರ್ಧೆ ಕಾರ್ಯಕ್ರಮದಲ್ಲಿ ಗಂಗೊಳ್ಳಿಯ ವಿವಿಧ ಶಾಲೆಗಳು ಭಾಗವಹಿಸಿದ್ದವು.
ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಉಪನ್ಯಾಸಕಿ ಸುಗುಣ ಆರ್. ಕೆ. ವಂದಿಸಿದರು.