ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪುರಾಣ ಪ್ರಸಿದ್ಧ ಕೋಟೇಶ್ವರ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಡಿ.15ರಂದು ದೇವರ ಶ್ರೀಮನ್ಮಹಾ ರಥೋತ್ಸವ ನಡೆಯಲಿದೆ.
ಬೆಳಗ್ಗೆ 11.45ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ಶ್ರೀ ಮನ್ಮಹಾ ರಥೋತ್ಸವ, ಡಿ.16ರಂದು ಚೂರ್ಣೋತ್ಸವ, ಅವಭ್ರತ ಸ್ನಾನ ಮುಂತಾದ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸ್ಥಳೀಯ ನಾನಾ ಭಜನಾ ಮಂಡಳಿಗಳ ನೇತೃತ್ವದಲ್ಲಿ ಭಜನೆ ಹಾಗೂ ಮಂಗಲೋತ್ಸವ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಡಿ.15ರಂದು ರಾತ್ರಿ 8ಕ್ಕೆ ಮಿತ್ರದಳದ ಮಿತ್ರೆಯರಿಂದ ‘ತನನಂ ತನನಂ’ ನೃತ್ಯ ವೈವಿಧ್ಯ ಹಾಗೂ ಡಿ.16ರಂದು ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ದಕ್ಷಯಜ್ಞ ಕಾರ್ಯಕ್ರಮ ಶಾಂತಾರಾಮ ನಡೆಯಲಿದೆ.