ಹಟ್ಟಿಯಂಗಡಿ ವಸತಿ ಶಾಲೆ ವಿದ್ಯಾರ್ಥಿಗಳು ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಮಂಗಳೂರಿನ ಪ್ರೆಸ್ಟೀಜ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿ.14 ರಂದು ಎ ಐ ಸಿ ಎಸ್ ಒಕ್ಕೂಟದವರು ಆಯೋಜಿಸಿದ ಉಡುಪಿ- ದಕ್ಷಿಣ ಕನ್ನಡ ಜಿಲ್ಲಾ ಅಂತರ್ ಶಾಲಾ ಕಬಡ್ಡಿ ಪಂದ್ಯಾಟದಲ್ಲಿ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು 14 ಮತ್ತು 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಪಾರಮ್ಯ ಮೆರೆಯಿತು.

Call us

Click Here

ಫೈನಲ್ ಕಾದಾಟದಲ್ಲಿ 14 ವರ್ಷದೊಳಗಿನ ಬಾಲಕರ ತಂಡ 21-14 ಅಂಕಗಳ ಅಂತರದಲ್ಲಿ ಹಾಗೂ 17 ವರ್ಷದೊಳಗಿನ ಬಾಲಕರ ತಂಡ 28-13 ಅಂಕಗಳ ಅಂತರದಲ್ಲಿ ಎದುರಾಳಿ ತಂಡಗಳನ್ನು ಮಣಿಸಿತು. 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಹಟ್ಟಿಅಂಗಡಿ ವಸತಿಶಾಲೆಯ ವಿಕಾಸ್ ಸಿ. ಬೆಸ್ಟ್  ಆಲ್ರೌಂಡರ್, 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ  ಹಟ್ಟಿಅಂಗಡಿ ವಸತಿಶಾಲೆಯ ಶಶಾಂಕ್ ಡಿ. ಎನ್. ಬೆಸ್ಟ್ ರೈಡರ್ ಹಾಗೂ  ಪ್ರಜ್ವಲ್ ಹೆಗಡೆ  ಬೆಸ್ಟ್  ಡಿಫೆಂಡರ್  ಗೌರವಕ್ಕೆ ಪಾತ್ರರಾದರು.

ವಿದ್ಯಾರ್ಥಿಗಳ ಪ್ರಚಂಡ ಪ್ರದರ್ಶನದ ಕುರಿತಾಗಿ ಪ್ರತಿಕ್ರಿಯಿಸಿದ  ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ  “ಇದೊಂದು ಅಭೂತಪೂರ್ವ ಗೆಲುವಾಗಿದ್ದು, ಸದಾಕಾಲ ಸ್ಮರಣೀಯವಾಗಿರಲಿದೆ. ಈ ಗೆಲುವು ಮುಂಬರುವ ನಮ್ಮ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿದೆ” ಎನ್ನುತ್ತಾ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು, ದೈಹಿಕ ಶಿಕ್ಷಕರು ಮತ್ತು ತರಬೇತುದಾರರನ್ನು ಅಭಿನಂದಿಸಿದರು.

Leave a Reply