ಶಂಕರನಾರಾಯಣ: ವಿದ್ಯುತ್ ಕಂಬದಿಂದ ಬಿದ್ದು ಯುವಕ ಸಾವು

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಶಂಕರನಾರಾಯಣ:
ಇಲ್ಲಿನ ಗ್ರಾಮದ ಕಯ್ಯಾಣಿ ಎಂಬಲ್ಲಿ ವಿದ್ಯುತ್ ಕಂಬದಿಂದ ಬಿದ್ದು ಶೇಡಿಮನೆ ಗ್ರಾಮದ ನಿವಾಸಿ ಲಕ್ಷ್ಮಣ(30) ಅವರು ಮೃತಪಟ್ಟಿದ್ದಾರೆ.

Call us

Click Here

ಕಯ್ಯಾಣಿಗೆ ಹೋಗುವ ರಸ್ತೆಯ ಬಳಿ ರಜನೀಶ್ ಹಾಗೂ ಇತರರೊಂದಿಗೆ ಹೊಸದಾಗಿ ನಿಲ್ಲಿಸಿದ ವಿದ್ಯುತ್ ಕಂಬಗಳಿಗೆ ಲೈನ್ ಕೆಲಸವನ್ನು ಮಾಡಲು ಅವರು ಕಂಬ ಹತ್ತಿದ್ದು ಶನಿವಾರ ಸಂಜೆ ಒಮ್ಮೆಲೆ ಅವರಿಗೆ ಫಿಡ್ಸ್ ಕಾಯಿಲೆ ಕಾಣಿಸಿಕೊಂಡು ಜೋರಾಗಿ ಕಿರುಚಿ ಅಂದಾಜು 21 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿದ್ದಾರೆ.

ಕೂಡಲೆ ಇತರೆ ಕೆಲಸಗಾರರು ಉಪಚರಿಸಿ 108 ಆಂಬ್ಯುಲೆನ್ಸ್‌ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಫಿಡ್ಸ್ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಸಹೋದರ ರಾಮ ನೀಡಿದ ದೂರಿನಂತೆ ಶಂಕರನಾರಾಯಣ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply