ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿಗೆ ಬಹುಮುಖ ಪ್ರತಿಭೆ ಓಂ ಗಣೇಶ್ ಉಪ್ಪುಂದ ಆಯ್ಕೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಿಂದ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ ಕೊಗ್ಗ ದೇವಣ್ಣ ಕಾಮತ್ ಅವರ ಸ್ಮರಣಾರ್ಥ ನೀಡಲಾಗುತ್ತಿರುವ 2024-25ನೇ ಸಾಲಿನ ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ’ಗೆ ಖ್ಯಾತ ಜಾದೂ ಕಲಾವಿದ, ಲೇಖಕ, ನಟ ಓಂ ಗಣೇಶ್ ಉಪ್ಪುಂದ ಅವರನ್ನು ಸಮಿತಿ ಆಯ್ಕೆ ಮಾಡಿದೆ.

Call us

Click Here

ಓಂ ಗಣೇಶ್ ಉಪ್ಪುಂದ ಅವರದ್ದು ಸೃಜನಶೀಲ ವ್ಯಕ್ತಿತ್ವ. ನಾಟಕದಲ್ಲಿ ಅಭಿನಯ, ಆರ್ಕೆಸ್ಟ್ರಾ ತಂಡ ಕಟ್ಟಿ ಹಿನ್ನೆಲೆ ಸಂಗೀತ ನುಡಿಸುವುದರಿಂದ ಆರಂಭಿಸಿ ವಿಶ್ವದಾದ್ಯಂತ ಜಾದೂ ಪ್ರದರ್ಶನ ನೀಡಿ ಜಾದೂ ರಂಗದಲ್ಲಿ ಅಪಾರ ಖ್ಯಾತಿ ಗಳಿಸಿದರು. ಜಾದೂವಿನೊಂದಿಗೆ ಅವರ ಬೆರಳ ನೆರಳಿನಾಟ ಪ್ರದರ್ಶನವೂ ಖ್ಯಾತಿ ಗಳಿಸಿತ್ತು. ಈ ಮಧ್ಯೆ ಹಲವಾರು ಸಿನೆಮಾಗಳಲ್ಲಿ ನಟನೆ, ಪತ್ರಕರ್ತರಾಗಿ ಸೇವೆ, ಉತ್ತಮ ವಾಗ್ಮಿಯಾಗಿ ನೂರಾರು ಕಾರ್ಯಕ್ರಮಗಳಲ್ಲಿ ಪ್ರೇರಣಾದಾಯಕ ಮಾತು, ಲೇಖಕರಾಗಿ ಹಲವು ಪುಸ್ತಕಗಳ ಪ್ರಕಟಣೆ. ಹೀಗೆ ವಿವಿಧ ರಂಗದಲ್ಲಿ ಓಂಗಣೇಶ್ ಅವರು ತೊಡಗಿಕೊಂಡವರು.

ಓಂಗಣೇಶ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಡಾ. ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ, ಕಡಲೋತ್ಸವ ಪುರಸ್ಕಾರ, ಸಾಂಸ್ಕೃತಿಕ ಕಂಠೀರವ ಪುರಸ್ಕಾರಗಳು ದೊರೆತಿದೆ.

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆ ಮನೆಯಲ್ಲಿ 2025ರ ಜನವರಿ 19ರಂದು ಅದ್ದೂರಿಯಾಗಿ ನಡೆಯುವ ಹತ್ತನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply