ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಜೇಸಿಐ ಉಪ್ಪುಂದದ 21ನೇ ವರ್ಷದ ಪದಪ್ರದಾನ ಸಮಾರಂಭ ಮಂಗಳವಾರ ಮಾತ್ರಶ್ರೀ ಸಭಾಭವನ ಇಲ್ಲಿನ ಜರುಗಿತು. 2024ನೇ ಸಾಲಿನ ಅಧ್ಯಕ್ಷರಾದ ಜೇಸಿ ಮಂಜುನಾಥ್ ದೇವಾಡಿಗರು ನೂತನ ಅಧ್ಯಕ್ಷರಾದ ಜೇಸಿ ಭರತ್ ದೇವಾಡಿಗ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ವೇದಿಕೆಯಲ್ಲಿ ವಲಯಾಧ್ಯಕ್ಷರಾದ ಜೇಸಿಐ ಸೆನೆಟರ್ ಅಭಿಲಾಷ್ ಬಿ.ಎ, ಪದಪ್ರಧಾನ ಅಧಿಕಾರಿ ಅಶ್ವಿನಿ ಐತಾಳ್, ಬಿ.ಎಸ್ ಸುಮುಖ ಗ್ರೂಪ್ ಆಫ್ ಕಂಪೆನಿ ಮ್ಯಾನೇಜಿಂಗ್ ಡೈರೆಕ್ಟರ್ ಸುರೇಶ್ ಶೆಟ್ಟಿ, ಸರಕಾರಿ ನೌಕರರ ಸಂಘ ಬೈಂದೂರು ತಾಲೂಕು ಅಧ್ಯಕ್ಷ ಶೇಖರ್ ಪೂಜಾರಿ, ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ, ಸ್ಥಾಪಕಾಧ್ಯಕ್ಷರಾದ ದಿವಾಕರ್ ಶೆಟ್ಟಿ, ಜೇಸಿರೇಟ್ ಸುಮನಾ ದೇವಾಡಿಗ, ಕಾರ್ಯದರ್ಶಿ ನರಸಿಂಹ ದೇವಾಡಿಗ ಮೊದಲಾವರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರು ತಮ್ಮ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು. 2024ನೇ ಸಾಲಿನ ಅಧ್ಯಕ್ಷರಾದ ಮಂಜುನಾಥ್ ದೇವಾಡಿಗ ಸ್ವಾಗತಿಸಿ ಗತವರ್ಷದ ವರದಿ ಮಂಡಿಸಿ ತಮ್ಮ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಪೂರ್ವಾಧ್ಯಕ್ಷರು ಹಾಗು ಸದಸ್ಯರನ್ನು ಅಭಿನಂದಿಸಿದರು.
ಶ್ರೀಲತಾ ದೇವಾಡಿಗ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು, ಜೆಜೆಸಿ ಅಧ್ಯಕ್ಷೆ ಸಂಜನಾ ದೇವಾಡಿಗ ಜೇಸಿವಾಣಿ ವಾಚಿಸಿದರು, ಜೇಸಿ ಅಭಿಷೇಕ್ ದೇವಾಡಿಗ ಆಲೂರು ವಂದನಾರ್ಪಣೆಗೈದರು