ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ನಿರ್ದೇಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಹಾಲಿ ಅಧ್ಯಕ್ಷ ಹರ್ಕೂರು ಮಂಜಯ್ಯ ಶೆಟ್ಟಿ ನೇತೃತ್ವದ ತಂಡ ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದೆ.
ಆಡಳಿತ ಮಂಡಳಿಗೆ ಸಾಮಾನ್ಯ ಸ್ಥಾನದಿಂದ ರಘುರಾಮ ದೇವಾಡಿಗ ಆಲೂರು, ಸತೀಶ ಶೆಟ್ಟಿ ಅಲೂರು, ಸೂಲ್ಯ ಪೂಜಾರಿ ನಾರ್ಕಳಿ ಹರ್ಕೂರು, ಗೋಪಾಲ ಆಲಿಯಾಸ್ ಗೋವಿಂದ ಹಳ್ಳದನೀರು, ಹೊಯ್ಯಾಣ, ಸಂತೋಷ ಕುಮಾರ ಶೆಟ್ಟಿ ಆಲೂರು, ಚಂದ್ರಶೇಖರ ಶೆಟ್ಟಿ ಎಮ್, ಹಕ್ರಮನೆ, ಗೋಳಿಕೆರೆ ಅಲೂರು, ಅಮರನಾಥ ಶೆಟ್ಟಿ ನಾರ್ಕಳಿ ಹಳ್ಳಿಜಡ್ಡು ಹರ್ಕೂರು ಆಯ್ಕೆಯಾದರು. ಮಹಿಳಾ ಮೀಸಲು ಸ್ಥಾನದಿಂದ ಅಕ್ಕಯ್ಯ ಯಾನೆ ಆಶಾ ಸಸಿಹಿತ್ತು, ಆಲೂರು. ಲಲಿತಾ ಕುಲಾಲ, ಪೇಟೆ ಆಲೂರು, ಹಿಂದುಳಿದ ವರ್ಗ ಪ್ರವರ್ಗ-ಎ ಮೀಸಲು ಸ್ಥಾನದಿಂದ ರಾಜೇಶ ಎನ್.ಡಿ ಆಲೂರು, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನದಿಂದ ಮಂಜಯ್ಯ ಶೆಟ್ಟಿ ಹೊಸಿಮನೆ ಹರ್ಕೂರು, ಪ.ಜಾತಿ ಮೀಸಲು ಸ್ಥಾನದಿಂದ ಸುರೇಶ ಆಲೂರು, ಪ.ಪಂಗಡ ಮೀಸಲು ಸ್ಥಾನದಿಂದ ಸುರೇಂದ್ರ ಮಧುಕೊಡ್ಲು ನಾರ್ಕಳಿ ಆಯ್ಕೆಗೊಂಡರು.
ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್ ಸಿ.ಎಮ್ ಆಯ್ಕೆ ಪ್ರಕ್ರಿಯೆ ನಿರ್ವಹಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವರಾಮ ಪೂಜಾರಿ ಮತ್ತು ವ್ಯವಸ್ಥಾಪಕರಾದ ಸಂಜೀವ ಪೂಜಾರಿ ಆಲೂರು ಸಹಕರಿಸಿದರು.