ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಾಸ್ಥಾನದ ಪ್ರಧಾನ ಅರ್ಚಕ ಹಾಗೂ ಪ್ರಧಾನ ತಂತ್ರಿಗಳಾದ ಮಂಜುನಾಥ ಅಡಿಗ (64) ಅವರು ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಮಂಜುನಾಥ ಅಡಿಗ ಅವರು ಸ್ನಾನಗೃಹದಲ್ಲಿ ಬಿದ್ದು ಅಸ್ವಸ್ಥಗೊಂಡು ಕುಟುಂಬಸ್ಥರು ನೀರು ಕುಡಿಸುವಷ್ಟರಲ್ಲೇ ಮೃತಪಟ್ಟರು.
ಅವರು ಹದಿನೆಂಟು ವರ್ಷಗಳಿಂದ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ ಮೃತರು, ಅನಾರೋಗ್ಯದ ನಿಮಿತ್ತ ದೇಗುಲದ ಪೂಜೆಯನ್ನು ನೆರವೇರಿಸಲು ತನ್ನ ಸ್ಥಾನವನ್ನು ಮಗ ನಿತ್ಯಾನಂದ ಅಡಿಗ ಅವರಿಗೆ ನೀಡಿದ್ದರು.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.