ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಭವಿಷ್ಯದ ಹೊಸ ಮತದಾರರಿಗಾಗಿ ರೂಪುಗೊಂಡಿರುವ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ ಚುನಾವಣಾ ಸಾಕ್ಷರತಾ ಕ್ಲಬ್ ತರಗತಿ ಆಧಾರಿತ ಚಟುವಟಿಕೆಯಡಿ ಶಂಕರನಾರಾಯಣ ಗ್ರಾಮ ಪಂಚಾಯತ್‍ಗೆ ಭೇಟಿ ನೀಡಿ ಚುನಾವಣಾ ಹಕ್ಕುಗಳ ಬಗ್ಗೆ ಅರಿವು, ಮತದಾನದ ಪ್ರಕ್ರಿಯೆ, ಸಮಾಜದಲ್ಲಿ ಮತಹಕ್ಕು ಜಾಗೃತಿಯನ್ನು ಉತ್ತೇಜಿಸುವಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಕಲ್ಗದ್ದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ವೇತಾ ಲತಾ ಎಚ್. ಜಿ., ಕಾರ್ಯದರ್ಶಿ ನಾಗೇಶ್ ಬಿ. ಮತ್ತು ಸಿಬ್ಬಂದಿಗಳು, ಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್‍ನ ನೋಡೆಲ್ ಶಿಕ್ಷಕರಾದ ಉಮೇಶ್ ಶೆಟ್ಟಿ ಮತ್ತು ರೇಷ್ಮಾ ಡಿ. ರೆಬೆಲ್ಲೋ, ಶಿಕ್ಷಕಿ ಬೇಬಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.