ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶಾಲೆಯ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿ, ಶಾಲೆಯ ಏಳಿಗೆ ಬಗ್ಗೆ ಸದಾ ಚಿಂತನೆ ನಡೆಸುತ್ತಿದ್ದ ದಾನಿಯೋರ್ವರ ಪುಣ್ಯಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಧನ್ಯತೆ ಮೆರೆದಿದ್ದಾರೆ.
ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿಯ ಹರಿಕಾರರಾದ ದಿ. ಕೊಂಚಾಡಿ ಗಣಪತಿ ಶೆಣೈ ಅವರ 6ನೇ ವರ್ಷದ ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಯಶೋಧ ಅವರು ದಿ. ಗಣಪತಿ ಶೆಣೈ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ದಿ. ಕೊಂಚಾಡಿ ಗಣಪತಿ ಶೆಣೈ ಹಾಗೂ ಅವರ ಕುಟುಂಬದವರ ಸಹಾಯ ಹಸ್ತದ ಬಗ್ಗೆ ಹಾಗೂ ಅವರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಶಾಲೆಯ ಮೇಲಿದ್ದ ಪ್ರೀತಿ, ವಿಶ್ವಾಸ, ಅಭಿಮಾನ ಹಾಗೂ ಕಾಳಜಿ ಬಗ್ಗೆ ಮಾತನಾಡಿದರು.
ಕೆಲವು ವಿದ್ಯಾರ್ಥಿಗಳು ದಿ. ಗಣಪತಿ ಶೆಣೈ ಅವರ ಭಾವಚಿತ್ರವನ್ನು ಬಿಡಿಸುವುದರ ಮೂಲಕ, ಅವರ ಕುರಿತು ಕವನ ರಚಿಸುವುದರ ಮೂಲಕ ಗೌರವ ಸಮರ್ಪಿಸಿದರು. ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಪು?ರ್ಚನೆಯ ಮೂಲಕ ಭಾವಪೂರ್ಣವಾಗಿ ನುಡಿ ನಮನಗೈದರು.