ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಡಿ.06: ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ಹೆಮ್ಮಾಡಿ ಇದರ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಎಲ್ಲಾ 13ಕ್ಕೆ 13 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಜಯ ಸಾಧಿಸಿದ್ದಾರೆ.
ಪಂಚಗಂಗಾ ಸಹಕಾರಿ ಬಳಗದ ಹಿಂದುಳಿದ ಬಿ ವರ್ಗದಿಂದ ಹಾಲಿ ಅಧ್ಯಕ್ಷ ಹಕ್ಲಾಡಿ ಸಂತೋಷಕುಮಾರ ಶೆಟ್ಟಿ, ಹಿಂದುಳಿದ ಎ ವರ್ಗದಿಂದ ರಾಘವೇಂದ್ರ ಪೂಜಾರಿ, ಸಾಮಾನ್ಯ ಕ್ಷೇತ್ರದಲ್ಲಿ ಶರತ್ ಕುಮಾರ್ ಶೆಟ್ಟಿ, ಆನಂದ ಬಿಲ್ಲವ ಉಪ್ಪಿನಕುದ್ರು, ಚಂದ್ರ ಪೂಜಾರಿ, ಚಂದ್ರ ಎಸ್. ನಾಯ್ಕ, ತಮ್ಮಯ್ಯ ದೇವಾಡಿಗ, ಸಂತೋಷ ಕುಮಾರ ಶೆಟ್ಟಿ ತೋಟಬೈಲು, ಸುಧಾಕರ ಎನ್. ದೇವಾಡಿಗ ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಚಂದ್ರಮತಿ ಹೆಗಡೆ, ಸುನಿತ ಪೂಜಾರಿ, ಪ. ಜಾತಿ ಮೀಸಲು ಕ್ಷೇತ್ರದಿಂದ ಸಂಜೀವ ಹಕ್ಲಾಡಿ, ಪ ಪಂಗಡ ಕ್ಷೇತ್ರದಿಂದ ಶಾರದ ಚುನಾವಣೆಯಲ್ಲಿ ಜಯ ಸಾಧಿಸಿದರು.
ಚುನಾವಣಾಧಿಕಾರಿಯಾಗಿ ಸುಮಿತ್ರಾ ಕುಮಾರಿ ಚುನಾವಣೆ ನಡೆಸಿಕೊಟ್ಟರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಶ ಪೂಜಾರಿ, ಲೇಖಪಾಲ ಭಾಸ್ಕರ ಪೂಜಾರಿ ಸಹಕರಿಸಿದರು.