ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ಷಷ್ಠಿ ಮಹೋತ್ಸವವು ಸಂಭ್ರಮದಿಂದ ಜರಗಿತು.
ಆನುವಂಶಿಕ ಮೊಕೇಸರ ಬಿ. ಅರುಣ್ ಕುಮಾರ್ ಶೆಟ್ಟಿ, ಅಭಿನಂದನ್ ಶೆಟ್ಟಿ ಅರ್ಚಕರು ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಜ. 5ರಂದು ಬೆಳಗ್ಗೆ ಗಣಪತಿ ಪ್ರಾರ್ಥನೆ, ಪುಣ್ಯಾಹ, ಪ್ರಧಾನಹೋಮ, ನವಕಲಶಾಭಿಷೇಕ, ಸಂಹಿತ ಪಾರಾಯಣ, ಕಲಶಾಭಿಷೇಕ ನಡೆಯಿತು. ತದನಂತರ ಹಣ್ಣುಕಾಯಿ, ಮಂಗಳಾರತಿ, ಹರಿವಾಣ ನೈವೇದ್ಯ ಸೇವೆಯಲ್ಲಿ ಭಕ್ತರು ಪಾಲ್ಗೊಂಡರು.
ಮಡೆ ಪ್ರದಕ್ಷಿಣೆ, ಶ್ರೀ ನಾಗದರ್ಶನ ದರ್ಶನ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು.
ಇಂದಿನ ಕಾರ್ಯಕ್ರಮ
ಬೆಳಗ್ಗೆ 6.30ಕ್ಕೆ ಹಾಲಿಟ್ಟು ಸೇವೆ, ಬೆಳಗ್ಗೆ 9.30ಕ್ಕೆ ನಾಗಮಂಡಲ, 11 ಗಂಟೆಗೆ ತುಲಾಭಾರ ಸೇವೆ ನಡೆಯಲಿದೆ.