ಜ.11 ರಂದು ಕುಂದಾಪುರ ಯುವ ಬಂಟರ ಸಂಘದಿಂದ ಕಲಿಕಾ ಸಾಧನ ವಿತರಣೆ, ಬಂಟ ಸಾಧಕರಿಗೆ ಪ್ರಶಸ್ತಿ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಯುವ ಬಂಟರ ಸಂಘ ಕುಂದಾಪುರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕಾ ಸಾಧನಗಳ ವಿತರಣೆ ಕಾರ್ಯಕ್ರಮ, ಬಂಟ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭವು ಜ.11ರ ಶನಿವಾರ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ.

Call us

Click Here

ಬೆಂಗಳೂರಿನ ಸೌತ್ ಫೀಲ್ಡ್ ಪೇಂಟ್ಸ್ ಆಡಳಿತ ನಿರ್ದೇಶಕರಾದ ಎಸ್. ಎಸ್. ಹೆಗ್ಡೆ ಉದ್ಘಾಟಿಸಲಿದ್ದಾರೆ. ಕುಂದಾಪುರದ ಹಿರಿಯ ಲೆಕ್ಕಪರಿಶೋಧಕರಾದ ಕೆ. ಸುಧಾಕರ ಹೆಗ್ಡೆ ಬಂಟ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ನಿತೀಶ್ ಶೆಟ್ಟಿ ಬಸ್ರೂರು ವಹಿಸಿಕೊಳ್ಳಲಿದ್ದಾರೆ. ಕೆ.ಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕಾ ಸಾಧನಗಳ ವಿತರಣೆ ಕಾರ್ಯಕ್ರಮ, ಬಂಟ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಎ.ಜೆ. ಹಾಸ್ಪಿಟಲ್ ಆಡಳಿತ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ, ನ್ಯೂ ಮೆಡಿಕಲ್ ಸೆಂಟರ್ ಕುಂದಾಪುರದ ಆಡಳಿತ ನಿರ್ದೆಶಕ ಡಾ. ರಂಜನ್ ಶೆಟ್ಟಿ, ಭದ್ರಾವತಿ ಬಂಟರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ, ಚಿಕ್ಕಮಂಗಳೂರು ಬಂಟರ ಯಾನೆ ನಾಡವರ ಸಂಘದ ಮಾಜಿ ಅಧ್ಯಕ್ಷ ಜಿ. ಶ್ರೀಧರ್ ಶೆಟ್ಟಿ, ಕುಂದಾಪುರ ತಾಲೂಕು ಸಮಿತಿ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ, ಹಿರಿಯ ವಕೀಲ ಟಿ.ಬಿ.ಶೆಟ್ಟಿ, ಬಂಟ್ಸ್ ಹೋಟೆಲ್ ಮಾಲಕರ ಸಂಘದ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಚಿತ್ತೂರು, ಹೇರೆಂಜಾಲು ಗುಡಿ ಮಹಾಲಿಂಗೇಶ್ವರ ಹ್ಯೂಮ್ ಪೈಪ್ಸ್‌ನ ಹಿರಿಯ ಉದ್ಯಮಿ ಜಯಶೀಲ ಶೆಟ್ಟಿ, ಕುಂದಾಪುರ ಕನ್ನಡ ಪ್ರತಿಷ್ಠಾನ ಬೆಂಗಳೂರಿನ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು, ಬಂಟಕೋಡು ಶಕೀಲಾ ಸುಕುಮಾರ್ ಶೆಟ್ಟಿ ಇನ್ನಿತರರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಎಂಜಿನಿಯರಿಂಗ್ ಕ್ಷೇತ್ರದ ಸಾಧಕ ಭವಾನಿ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಆನಗಳ್ಳಿ ಜಯಕರ ಹೆಗ್ಡೆ, ವೈದ್ಯಕೀಯ ಕ್ಷೇತ್ರದಿಂದ ಬೈಂದೂರಿನ ಶಾರದ ಕ್ಲಿನಿಕ್ ವೈದ್ಯ ಡಾ. ಎಂ. ಸಚ್ಚಿದಾನಂದ ಶೆಟ್ಟಿ, ಕುಂದಾಪುರ ಹಿರಿಯ ವಕೀಲರಾದ ಜಿ. ಸಂತೋಷ ಕುಮಾರ ಶೆಟ್ಟಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಭಾಪತಿ ಎಸ್. ಜಯಕರ ಶೆಟ್ಟಿ, ಯಡಾಡಿ-ಮತ್ಯಾಡಿ ಹಿರಿಯ ಉದ್ಯಮಿ ಅರುಣ್ ಕುಮಾರ್ ಹೆಗ್ಡೆ, ಯಕ್ಷಗಾನ ಕ್ಷೇತ್ರದಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಶಿಕ್ಷಣ ಕ್ಷೇತ್ರದಲ್ಲಿ ಎನ್‌ಐಟಿಕೆ ಪ್ರೊಫೆಸರ್ ಡಾ. ಚಿತ್ತರಂಜನ್ ಹೆಗ್ಡೆ, ಕ್ರೀಡಾ ಕ್ಷೇತ್ರದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಅಂಪಾರು, ಸಹಕಾರಿ ಕ್ಷೇತ್ರದಲ್ಲಿ ಎಸ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಮಹೇಶ್ ಹೆಗ್ಡೆ ಉದ್ಯಮ ಕ್ಷೇತ್ರದಲ್ಲಿ ಕೂರ್ಗಿ ಗೋಪಾಲ್ ಶೆಟ್ಟಿ ಅವರಿಗೆ ಬಂಟ ಸಾಧಕ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷ ವತ್ತರಾ ದಯಾನಂದ್‌ ಶೆಟ್ಟಿ ಸ್ಥಾಪಕಾಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ, ಅಧ್ಯಕ್ಷ ನಿತೀಶ್‌ ಶೆಟ್ಟಿ ಬಸ್ರೂರು ತಿಳಿಸಿದ್ದಾರೆ.

Click here

Click here

Click here

Click Here

Call us

Call us

Leave a Reply