ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗ ಕೋಟೇಶ್ವರ ಶಾಲಾ ಹಳೆ ವಿದ್ಯಾರ್ಥಿಗಳ ಸಾರಥ್ಯದಲ್ಲಿ ನಡೆಯುತ್ತಿರುವ ಶತಮಾನೋತ್ಸವ ಕಾರ್ಯಕ್ರಮದ ಶಾಲಾ ಆವರಣದಲ್ಲಿ ಗುರುವಾರ ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ವಹಿಸಿ ಮಾತನಾಡಿ, ಸ್ಥಳೀಯ ಕೋಟೇಶ್ವರದ ಕೊಡಿ ಹಬ್ಬಗಳಂತೆ, ಶಾಲೆಯ ಶತಮಾನೋತ್ಸವದ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯುತ್ತಿರುವು ಸಂತಸದ ಸಂಗತಿ ಎಂದರು.
ಶ್ರೀಧರ್ ವಿಟ್ಟಲ್ ಕಾಮತ್ ಅಧ್ಯಕ್ಷರು ಶತಮಾನೋತ್ಸವ ಸಮಿತಿ ಕೆಪಿಎಸ್ ಪ್ರಥಮಿಕ ವಿಭಾಗ ಉಡುಪಿ ಜಿಲ್ಲಾ ಉಪನಿರ್ದೇಶಕರು ಡಿ.ಡಿ.ಪಿ. ಗಣಪತಿ ಕೆ., ಕೋಟೇಶ್ವರ ಗ್ರಾಮ ಪಂಚಾಯಿತಿನ ಅಧ್ಯಕ್ಷೆ ರಾಗಿಣಿ ದೇವಾಡಿಗ, ರಾಜೇಶ್ ಉಡುಪ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಹಾಗೂ ಶತಮಾನೋತ್ಸವ ಸಮಿತಿ ಕೆಪಿಎಸ್ ಪ್ರಾಥಮಿಕ ವಿಭಾಗ, ಉದ್ಯಮಿ ಹಾಗೂ ಶಾಲಾ ಹಳೆ ವಿದ್ಯಾರ್ಥಿ ದಿನೇಶ್ ಕಾಮತ್, ಡಾ. ಭಾಸ್ಕರ ಆಚಾರ್ಯ ಗೌರವ ಉಪಾಧ್ಯಕ್ಷರು, ಶತಮಾನೋತ್ಸವ ಸಮಿತಿ ಕೆಪಿಎಸ್ ಪ್ರಾಥಮಿಕ ವಿಭಾಗ ಪ್ರಕಾಶ್ ಶೆಟ್ಟಿ, ಪ್ರಾಂಶುಪಾಲರು ಕೆಪಿಎಸ್ ಕೋಟೇಶ್ವರ, ಚಂದ್ರಶೇಖರ್ ಶೆಟ್ಟಿ ಉಪ ಪ್ರಾಂಶುಪಾಲರು ಕೆಪಿಎಸ್ ಕೋಟೇಶ್ವರ, ಚಂದ್ರನಾಯಕ್ ಎಚ್ ಮುಖ್ಯೋಪಾಧ್ಯಾಯರು ಕೆಪಿಎಸ್ ಕೋಟೇಶ್ವರ, ಮನೋಹರ್ ಪೈ ಅಧ್ಯಕ್ಷರು ಶಾಲಾ ಶೈಕ್ಷಣಿಕ ಸಮಿತಿ ಕೆಪಿಎಸ್ ವಿಭಾಗ ಕೋಟೇಶ್ವರ, ಅಶೋಕ್ ಗೋಪಾಡಿ ನಿಕಟ ಪೂರ್ವ ಶಾಲಾ ಶೈಕ್ಷಣಿಕ ಸಮಿತಿ ಮತ್ತು ಶಾಲಾ ಎಸ್ ಡಿ ಎಂ ಸಿ ಸದಸ್ಯರು, ಕೆಪಿಎಸ್ ಕೋಟೇಶ್ವರ, ಸುಧಾಕರ್ ನಂಬಿಯಾರ್ ಪತ್ರಿಕಾ ವರದಿಗಾರರು, ರಾಜೇಶ್ ಪ್ರಭು ಖಜಾಂಚಿ ಶತಮಾನೋತ್ಸವ ಸಮಿತಿ ಮತ್ತು ಕಾರ್ಯದರ್ಶಿ ಹಳೆ ವಿದ್ಯಾರ್ಥಿಗಳ ಸಂಘ ಕೆಪಿಎಸ್ ಕೋಟೇಶ್ವರ, ಮಾಸ್ಟರ್ ಸುಶಾಂತ್ ಶಾಲಾ ವಿದ್ಯಾರ್ಥಿ ನಾಯಕ, ಕೆಪಿಎಸ್ ಪ್ರಾಥಮಿಕ ವಿಭಾಗ ಹಾಗೂ ಶಾಲಾ ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಸಮಿತಿ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.