ಸೌತ್ ಏಶಿಯನ್ ಕ್ರೀಡಾಕೂಟ: ರಿಲೇ ಓಟದಲ್ಲಿ ಶಂಕರ ಪೂಜಾರಿ ಅವರಿಗೆ ಚಿನ್ನದ ಪದಕ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜ.10 ರಿಂದ 12ರ ವರೆಗೆ ನಡೆದ ಸೌತ್ ಏಶಿಯನ್ ಕ್ರೀಡಾಕೂಟದಲ್ಲಿ ಭಾರತದ ಪ್ರತಿನಿಧಿಯಾಗಿ  4×100 ರಿಲೇ ಓಟದಲ್ಲಿ ಸ್ಪರ್ಧೆಸಿದ ಉಡುಪಿ ಡಿಎಆರ್‌ನ ಮೀಸಲು ಪೊಲೀಸ್  ಸಹಾಯಕ ಉಪನಿರೀಕ್ಷಕ ಶಂಕರ ಪೂಜಾರಿ ಅವರು ಚಿನ್ನದ ಪದಕ ಗಳಿಸಿರುತ್ತಾರೆ.

Call us

Click Here

ಈ ಕ್ರೀಡಾಕೂಟದಲ್ಲಿ ದೇಶ ವಿದೇಶಗಳ ಸಾವಿರಾರು ಕ್ರೀಡಾ ಪಟುಗಳು ಭಾಗವಹಿಸಿರುತ್ತಾರೆ. ಮೂಲತಃ ಬೈಂದೂರು ತಾಲೂಕು ಬಿಜೂರಿನವರಾದ ಶಂಕರ ಪೂಜಾರಿ ಅವರು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ್ದು, ಓಟ, ರಿಲೇ ಮೊದಲಾದ ವಿಭಾಗದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ತನಕವೂ ಭಾಗವಹಿಸಿದ್ದಾರೆ. 2014ರಲ್ಲಿ ನಡೆದ 26ನೇ ಮಲೇಷಿಯಾ ಅಥ್ಲೆಟಿಕ್ ಚಾಂಪಿಯನ್’ಶಿಪ್’ನಲ್ಲಿ 2 ಚಿನ್ನ ಹಾಗೂ ಎರಡು ಬೆಳ್ಳಿಯ ಪದಕ ಗೆದ್ದಿದ್ದರು.ಇತ್ತಿಚಿಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಮಾಸ್ಟ್ ಸ್ಪೋರ್ಟ್ಸ್ 2021 ಕ್ರೀಡಾಕೂಟ 100 ಹಾಗೂ 200 ಮೀಟರ್ ಓಟದ ಸ್ವರ್ಧೆಯಲ್ಲಿ ಅವರು ಬೆಳ್ಳಿಯ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ಶಂಕರ ಪೂಜಾರಿ ಅವರು ಪ್ರಸ್ತುತ ಅವರು ಯಡ್ತಾಡಿ ಸೈಬ್ರಕಟ್ಟೆಯಲ್ಲಿ ನೆಲೆಸಿದ್ದಾರೆ.

Leave a Reply