ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದಿ. ಕೊಲ್ಲೂರು ಮಂಜುನಾಥ ಅಡಿಗರು ಧಾರ್ಮಿಕ ವಿಚಾರವಾಗಿ ಅಪಾರ ಜ್ಞಾನ ಹೊಂದಿದ್ದು ಅವರ ಮಾರ್ಗದರ್ಶನದಿಂದ ಕೊಲ್ಲೂರು ಕ್ಷೇತ್ರ ಹಾಗೂ ಉಪ್ಪುಂದ ಕ್ಷೇತ್ರದ ಬೆಳವಣಿಗೆಯಲ್ಲೂ ಅವರ ಪಾತ್ರ ದೊಡ್ಡದಾಗಿದೆ ಎಂದು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಯು. ಸತೀಶ್ ಶೆಟ್ಟಿ ಹೇಳಿದರು.
ಅವರು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಇತ್ತೀಚೆಗೆ ನಿಧನರಾದ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಮತ್ತು ತಂತ್ರಿ ದಿ. ಮಂಜುನಾಥ ಅಡಿಗ ಕೊಲ್ಲೂರು ಹಾಗೂ ಉಪ್ಪುಂದ ದೇವಸ್ಥಾನದ ಅರ್ಚಕ ದಿ. ರಮೇಶ್ ಉಡುಪ ಅವರ ಶೃದ್ಧಾಂಜಲಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಮೂರ್ತಿ ಶಂಕರನಾರಾಯಣ ಭಟ್ ಉಪ್ಪುಂದ ಮೃತರ ಕುರಿತು ಪ್ರಾಸ್ಥಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಾದ ನಾರಾಯಣ ಖಾರ್ವಿ, ಲಲಿತಾ ಶೆಟ್ಟಿ, ರವೀಂದ್ರ ಪ್ರಭು, ರಾಜೇಶ್ ದೇವಾಡಿಗ ಉಪಸ್ಥಿತರಿದ್ದರು.
ಮೃತರ ಆತ್ಮಕ್ಕೆ ಚಿರಶಾಂತಿಗೆ ಒಂದು ನಿಮಿಷದ ಮೌನಾಚರಣೆ ಹಾಗೂ ಭಾವ ಚಿತ್ರಕ್ಕಕ್ಕೆ ಪುರ್ಷ್ಪಾಚನೆ ಮಾಡಲಾಯಿತು. ಓಂಕಾರ್ ಡಿ. ಉಪ್ಪುಂದ ಸ್ವಾಗತಿಸಿದರು, ದೇವಳದ ಸಿಬ್ಬಂದಿ ಸುರೇಶ್ ಭಟ್ ವಂದಿಸಿದರು, ಯು. ಸಂದೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.