ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಐಡಿಯಲ್ ಪ್ಲೇ ಅಬಾಕಸ್ ವತಿಯಿಂದ ಬೆಂಗಳೂರಿನಲ್ಲಿ ನಡೆದ 20ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥಮೆಟಿಕ್ ಸ್ಪರ್ಧೆಯಲ್ಲಿ ಕುಂದಾಪುರ ವಿಭಾಗದಿಂದ ಸ್ಪರ್ಧಿಸಿದ್ದ 96 ವಿದ್ಯಾರ್ಥಿಗಳಲ್ಲಿ, 10 ವಿದ್ಯಾರ್ಥಿಗಳು ಚಾಂಪಿಯನ್, 12 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 27 ವಿದ್ಯಾರ್ಥಿಗಳು ದ್ವಿತೀಯ, 23 ವಿದ್ಯಾರ್ಥಿಗಳು ತೃತೀಯ, 16 ವಿದ್ಯಾರ್ಥಿಗಳು ನಾಲ್ಕನೆ ಮತ್ತು 7 ವಿದ್ಯಾರ್ಥಿಗಳು ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಲಿಖಿತಾ ಹಂಗಳೂರು ಅವರು ವಿಕಿ ಚಾಂಪಿಯನ್‌ನಲ್ಲಿ ಬಂಗಾರದ ಪ್ರಶಸ್ತಿ ಪಡೆದ್ದಿದ್ದಾರೆ. ಪರ್ವಧಿ ಪಿ. ಎಂ., ಪ್ರಣಮ್ ಖಾರ್ವಿ, ಶರಧಿ ಆರ್., ಪ್ರತ್ವಿಕ್ ಸಿ. ಪೂಜಾರಿ, ಯುಕ್ತಿ ಶೆಟ್ಟಿ, ಅನ್ವಿತ್ ಶೆಟ್ಟಿ, ಆಯುಷ್ ಜಿ. ಖಾರ್ವಿ, ತ್ರಿಷಾ ದೇವಾಡಿಗ, ನಮನ್ ಎನ್., ಭುವನ್ ಬಿ. ಕಾಂಚನ ಅವರು 5 ನಿಮಿಷದಲ್ಲಿ 100 ಕ್ಕೆ 100 ಲೆಕ್ಕ ಮಾಡುವುದರ ಮೂಲಕ ಚಾಂಪಿಯನ್ ಆಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ದೇಶದ ವಿವಿಧ ಭಾಗಗಳಿಂದ ಸುಮಾರು 2,600 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.