ಶ್ರೀ ಜೈನ ಜಟ್ಟಿಗೇಶ್ವರ ದೈವಸ್ಥಾನ ಅರಸನ ಕೆರೆ ಮೆಟ್ಟಿನಹೊಳೆ ವಾರ್ಷಿಕ ಉತ್ಸವ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಶ್ರೀ ಜೈನ ಜಟ್ಟಿಗೇಶ್ವರ ದೇವಸ್ಥಾನದ ಅರಸನಕೆರೆ ಮೆಟ್ಟಿನಹೊಳೆ ಇದರ ವಾರ್ಷಿಕ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಆಡಳಿತ ಮೋಕ್ತೆಸರರಾದ ಕರುಣಾಕರ ಶೆಟ್ಟಿ ನೆಲ್ಯಾಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

Call us

Click Here

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲ್ತೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ  ಅಣ್ಣಪ್ಪ ಶೆಟ್ಟಿ ಶುಭ ಸಂಶನೆ ಗೈದರು. ಬೈಂದೂರು ಬಂಟರ ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ ಸಾಲ್ಗದ್ದೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿರುವ ಉದ್ಯಮಿ ಬಿಎಸ್ ಸುರೇಶ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಮಹಾಲಿಂಗ ನಾಯ್ಕ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಶೇಖರ ಪೂಜಾರಿ ಅವರುಗಳನ್ನು ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ಮೆಟ್ಟಿನಹೊಳೆ ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಈಗ ಬಿ. ಆರ್. ಪಿ. ಆಗಿರುವ ಮಂಜುನಾಥ ದೇವಾಡಿಗ, ಅನ್ನ ಸಂತರ್ಪಣೆ ಸೇವಾಕರ್ತರಾದ ಮೋಹಿನಿ ಶೆಟ್ಟಿ ನೆಲ್ಯಾಡಿ, ರಾಘವೇಂದ್ರ ಕುಲಾಲ್ ಸಿದ್ದು ಮನೆ, ಮುತ್ತು ನಾರಾಯಣ ದೇವಾಡಿಗ ಅಂಬಾಗಿಲು, ಅನುಷಾ ಅಭಿಷೇಕ್ ದೇವಾಡಿಗ ಬಿಜೂರು ಹಾಗೂ ಯೋಗಾಸನದ ಪ್ರತಿಭೆ ಸಂಜನಾ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವಿದ್ಯಾಲಕ್ಷ್ಮಿ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇದರ ಚೇರ್ಮನ್ ಸುಬ್ರಹ್ಮಣ್ಯ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶೇಖರ್ ಶೆಟ್ಟಿ, ಶಾರದ ಕುಲಾಲ್, ಜಗನ್ನಾಥ ಕುಲಾಲ್‌, ಹೋಟೆಲ್ ಉದ್ಯಮಿಗಳಾದ ಸೀತಾರಾಮ ಕುಲಾಲ್, ವಿಜಯ ಕುಲಾಲ್, ನಾರಾಯಣ ಕುಲಾಲ್, ಬಾಬು ಕುಲಾಲ್, ಉದಯ ಕುಲಾಲ್, ಉಮೇಶ್ ದೇವಾಡಿಗ ಕುಲಾಲ್, ಯುವವೇದಿಕೆ ಅಧ್ಯಕ್ಷ ಸುರೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

ಶಿಕ್ಷಕ ನಾರಾಯಣ್ ರಾಜು ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೀವ ಶೆಟ್ಟಿ, ಶಿಕ್ಷಕ ತಾಜುದ್ದೀನ್ ಹಾಗೂ ಗಾಯಕಿ ವಿಜಯಲಕ್ಷ್ಮಿ ಸಹಕರಿಸಿದರು. ಶ್ರೀಧರ ಜೋಯಿಷಿ ನೇತೃತ್ವದ ಅರ್ಚಕ ವರ್ಗ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಚೇತನ್ ನೈಲಾಡಿ ತಂಡದವರು ಮನೋರಂಜನ ಕಾರ್ಯಕ್ರಮ ನಡೆಸಿಕೊಟ್ಟರು.

Leave a Reply