ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇನ್ಸಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರಿಸ್ ಇನ್ ಇಂಡಿಯಾದವರು ನಡೆಸಿದ ಸಿಎಸ್ಇಇಟಿ (ಕಂಪೆನಿ ಸಕ್ರೇಟರಿ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್) ಪ್ರವೇಶ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ 10 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಕ್ರಮವಾಗಿ ಧೀರಜ್ ಶೇಟ್, ಸುಜನ್ ಎಸ್.ಪಿ, ಅರ್ಚನ್ ಕುಮಾರ್, ಮೈತ್ರಿ, ಅಕ್ಷೋಭ್ಯ, ವಿಸ್ಮಿತಾ, ಸ್ಪಂದನ್, ಶಾಶ್ವತ್ ಶೆಟ್ಟಿ, ಕೌಶಿಕ್ ಶೆಟ್ಟಿ ಮತ್ತು ಭುವನ್. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.