ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪಶ್ಚಿಮ ಘಟ್ಟದ ಸಹ್ಯಾದ್ರಿ ಶ್ರೇಣಿಗೆ ಹೊಂದಿಕೊಂಡ ಅಪ್ಪಟ ಗ್ರಾಮೀಣ ಸೊಗಡಿನ ಹಿರಿಮೆ ಇರುವುದು ಉಪ್ಪುಂದ ಗ್ರಾಮದ್ದಾಗಿದೆ. ಕೃಷಿ ಹಾಗೂ ಮೀನುಗಾರಿಕೆ ಇಲ್ಲಿನವರ ಮುಖ್ಯ ಕುಲಕಸುಬು. ಅಕ್ಕಪಕ್ಕದ ಗ್ರಾಮಗಳಿಗಿಂತ ಉತ್ತಮ ಮಟ್ಟದಲ್ಲಿ ಅಭಿವೃದ್ದಿಯಾಗಿದೆ. ಇಲ್ಲಿನ ಗ್ರಾಮ ಪಂಚಾಯತ್, ವಿವಿಧ ಇಲಾಖೆಗಳ ಯೋಜನೆ ಅನುಷ್ಠಾನದ ಮೂಲಕ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಬಹಳ ಹಿಂದಿನಿಂದಲೂ ಗುರುತಿಸಿಕೊಂಡಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಅವರು ಉಪ್ಪುಂದ ಗ್ರಾಮ ಪಂಚಾಯತ್‌ನ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಗ್ರಾಮದ ಸ್ಥಳಿಯಾಡಳಿತ ಸದಸ್ಯರ ದೂರದೃಷ್ಠಿತ್ವದಿಂದ ಕೂಡಿದ ಚಿಂತನೆಗಳು, ಇಚ್ಛಾಶಕ್ತಿ ಹಾಗೂ ಗ್ರಾಮದ ಮತ್ತು ಗ್ರಾಮಸ್ಥರ ಕುಂದು ಕೊರತೆಗಳನ್ನು ವ್ಯವಸ್ಥಿತವಾಗಿ ಶೀಘ್ರವಾಗಿ ಸ್ಪಂದಿಸಿ ಪರಿಹರಿಸುವ ಕೆಲಸ ಮಾಡಿದ್ದಲ್ಲಿ ಅದು ನಿರೀಕ್ಷಿತಮಟ್ಟ ತಲುಪಲು ಸಾಧ್ಯ. ಗ್ರಾಮಾಭಿವೃದ್ಧಿಗೆ ಸದಸ್ಯರ ಉತ್ತಮ ಯೋಚನೆ ಹಾಗೂ ಯೋಜನೆಗಳೂ ಕೂಡ ಅತ್ಯಗತ್ಯ ಎಂದರು.
ಗ್ರಾಪಂ ಅಧ್ಯಕ್ಷ ಮೋಹನಚಂದ್ರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ, ವಿಧಾನ ಪರಿಷತ್ ಸದಸ್ಯ ಕಿಶೋರಕುಮಾರ್ ಪುತ್ತೂರು, ಬೈಂದೂರು ತಾಪಂ ಇಒ ರವಿಕುಮಾರ್ ಹುಕ್ಕೇರಿ, ಗ್ರಾಪಂ ಮಾರ್ಗದರ್ಶಿ ಅಧಿಕಾರಿ ನಾಗೇಶ ಕೆ. ನಾಯ್ಕ್, ಗ್ರಾಪಂ ಸದಸ್ಯರಾದ ಸುಮಿತ್ರಾ ಗಾಣಿಗ, ರೇಷ್ಮಾ ಎಸ್. ಭಟ್, ಬಾಬು ದೇವಾಡಿಗ, ಮಂಜಿ, ಶ್ರೀನಿವಾಸ, ವೀರಭದ್ರ, ದಿವಾಕರ ಶೆಟ್ಟಿ, ಸುಶೀಲಾ, ವೀಣಾ ಪೂಜಾರಿ, ಪ್ರೇಮಾ ದೇವಾಡಿಗ, ಮಂಜುನಾಥ ದೇವಾಡಿಗ, ನಾಗರಾಜ ಶೇಟ್, ಲಕ್ಷ್ಮೀ, ಶ್ರೀಧರ, ಪೂರ್ಣಿಮಾ ನಾಗರಾಜ ಖಾರ್ವಿ, ಸುಪ್ರೀತಾ, ದುರ್ಗಮ್ಮ, ಬಾರಿನ ಗಿರಿಜಾ, ಮುರಳೀಧರ, ವಿನೋದರಾಜ್, ಶೇಖರ ಪೂಜಾರಿ, ಪ್ರಕಾಶ ಆಚಾರ್, ಮಂಜಮ್ಮ, ಸುಪ್ರೀತಾ ಶೆಟ್ಟಿ, ಗಿರಿಜಾ ಇದ್ದರು.
ರೇಖಾ ನಿರೂಪಿಸಿ, ಪಿಡಿಒ ಸುದರ್ಶನ್ ಎಸ್. ಸ್ವಾಗತಿಸಿದರು. ಕಾರ್ಯದರ್ಶಿ ಗಿರಿಜಾ ವಂದಿಸಿದರು.















