ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಹಳಗೇರಿಯ ಶ್ರೀ ಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಬೈರವ ದೇವಸ್ಥಾನದಲ್ಲಿ ದ್ವೀತಿಯ ವರ್ಷದ ವರ್ಧಂತ್ಯುತ್ಸವ, ಶಿರಸಿ ಶ್ರೀ ಮಾರಿಕಾಂಬ ದೇವಿಯ ಪುನರ್ ಪ್ರತಿಷ್ಠೆ- ಕಲಶೋತ್ಸವ, ಶ್ರೀ ಕಾಲಬೈರವ ಸೇವಾ ಸಂಘದ 11ನೇ ವಾರ್ಷಿಕೋತ್ಸವ, ಶ್ರೀ ಶಿವಗೋರಕ್ಷನಾಥ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭವು ಜ.26 ರಿಂದ ಜ.27 ರ ತನಕ ನಡೆಯಲಿದೆ.
ಜ. 26ರ ಬೆಳಿಗ್ಗೆ 9.30ರಿಂದ ಚಿತ್ರಕೂಟ ಸಹಿತ ಶ್ರೀ ನಾಗದೇವರಿಗೆ ಪಂಚವಿಂಶತಿ ಕಲಶ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾ ಪೂಜೆ, ಪ್ರಸಾದ ವಿತರಣೆ ಹಾಗೂ ಸಂಜೆ 5.30ರಿಂದ ಶ್ರೀ ಮಾರಿಕಾಂಬ ದೇವಿಯ ಬಿಂಬ ಪುನರ್ ಪ್ರತಿಷ್ಠೆ, ಬಿಂಬಪ್ರತಿಷ್ಠಾಪನಾಧಿಹೋಮಗಳು, ಚತುಃ ವಿಂಶತಿ ಕಲಶ ಸ್ಥಾಪನಾದಿ ಹೋಮಗಳು, ಕಲಶಾಭೀಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಜ.27ರ ಬೆಳಿಗ್ಗೆ 9.30ರಿಂದ ಶ್ರೀ ಕಾಲಭೈರವ ದೇವರಿಗೆ ದ್ವೀತಿಯ ವರ್ಧಂತ್ಯುತ್ಸವ ಪ್ರಯುಕ್ತ ಅಷ್ಠೋತ್ತರ ಕಲಶ, ತತ್ವ ಹೋಮ, ಅಧಿವಾಸ ಹೋಮ, ವಿಶೇಷ ಪಂಚಾಮೃಭಿಷೇಕ, ಕಲಾಶಭಿಷೇಕ, ಮಹಾಪೂಜೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ , ಗುರುಪಾದ ಪೂಜೆ, ಮಹಾಅನ್ನಸಂತರ್ಪನಡೆಯಲಿದೆ.
ಅದೇ ದಿನ ಸಂಜೆ 5.00 ರಿಂದ ʼಭಜನೆʼ ದೀಪೋತ್ಸವ, ದೇವರ ಉತ್ಸವ, ಮಹಾಪೂಜೆ ಕ್ಷೇತ್ರದ ತಂತ್ರಿಗಳಾದ ವೇದರ್ಮೂತಿ, ಬ್ರಹ್ಮಶ್ರೀ ನೀಲಾವರ ರಘುರಾಮ ಮಧ್ಯಸ್ಥರ ನೇತ್ರತ್ವದಲ್ಲಿ ಕ್ಷೇತ್ರದ ಜೋಯಿಸರಾದ ರಾಮಚಂದ್ರ ನಾವುಡ ತೆಂಕಬೆಟ್ಟು ಹಾಗೂ ಕ್ಷೇತ್ರ ಅರ್ಚಕರುಗಳ ಸಹಾಕರದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿರುವುದು.
ಸಂಜೆ 6.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮವು ವಿಶಾಲಾಕ್ಷಿ ಮತ್ತು ನಾಗಪ್ಪಯ್ಯ ನಾವುಡರ ವೇದಿಕೆಯಲ್ಲಿ ನಡೆಲಿದೆ.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಾಲಬೈರವ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ರಾದ ಟಿ. ಎಸ್. ನಾಗೇಶ ಜೋಗಿ ಅವರು ವಹಿಸಲಿದ್ದಾರೆ. ಯಡಮೊಗೆ ಶ್ರೀ ಸಿದ್ದಪೀಠ ಕೊಡಚಾದ್ರಿ ಹಲವರಿಮಠ ಪೀಠಾಧ್ಯಕ್ಷರಾದ ಶ್ರೀ ಪೀರ್ ಯೋಗೀ ಜಗದೀಶ್ ನಾಥಜೀ ಆರ್ಶಿವಚನ ನೀಡಲಿದ್ದಾರೆ. ಮಂಗಳೂರು ಮಹಾ ಸಂಸ್ಥಾನ ಶಾಖಾ ಮಠ ಕಾವೂರು ಶ್ರೀ ಕ್ಷೇತ್ರ ಆದಿಚುಂಚನಗಿರಿ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ದೀಪ ಪ್ರಜ್ವಲನ ಬೆಳಗಲಿದ್ದಾರೆ. ಹುಬ್ಬಳ್ಳಿ ಸೀತಾಗಿರಿ ಆಧ್ಯಾತ್ಮ ಪೀಠ ಅಣ್ಣಿಗೇರಿ ಶ್ರೀ ಸದ್ಗುರು ವಾಲಿ ಮಹಾರಾಜ್ ಶುಭಸಂಶನೆ ನುಡಿಯಲಿದ್ದಾರೆ.
ಶ್ರೀ ಶಿವಗೋರಕ್ಷಕನಾಥ ಸೇವಾ ಪ್ರಶಸ್ತಿಯನ್ನು ಧಾರ್ಮಿಕ ಮುಂಡಳಿ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರಿಗೆ ಪ್ರದಾನಿಸಲಾಗುತ್ತದೆ. ಶ್ರೀ ಕ್ಷೇತ್ರ ಸಿಂಗಧೂರು ಶ್ರೀ ಚೌಡೇಶ್ವರಿ ದೇವಾಸ್ಥಾನದ ಪ್ರಧಾನ ಅರ್ಚಕರಾದ ಪಿ. ಶೇಷಗಿರಿ ಭಟ್ ಹಾಗೂ ಗೌರವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಬಿ.ವೈ ರಾಘವೇಂದ್ರ ಉಪಸ್ಥಿತರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ, ಬೈಂದೂರು ಕ್ಷೇತ್ರದ ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಹೈದ್ರಾಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ಘಟಪ್ರಭಾ ಉದ್ಯಮಿ ಜಯಶೀಲ ಶೆಟ್ಟಿ, ಶ್ರೀ ಕ್ಷೇತ್ರ ಕೊಲ್ಲೂರು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ.ಬಾಬು ಹೆಗ್ಡೆ, ಶ್ರೀ ಕ್ಷೇತ್ರ ಕೊಲ್ಲೂರು ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಜೇಶ್ ಕಾರಂತ, ಕಂಬದಕೋಣೆ ಗ್ರಾಮ ಪಂಚಾಯತಿ ಸದಸ್ಯರಾದ ಸುಬ್ರಹ್ಮಣ್ಯ ಜೋಗಿ ಕೆಳಮನೆ ಹಾಗೂ ಹಳಗೇರಿ ತೆಂಕಬೆಟ್ಟು ಶ್ರೀ ಕಾಲಭೈರವ ಸೇವಾ ಸಂಘದ ಅಧ್ಯಕ್ಷರಾದ ರಾಮ ಜೋಗಿ ತೆಂಕಬೆಟ್ಟು ಇನ್ನಿತರರು ಭಾಗವಹಿಲಿದ್ದಾರೆ.
ರಾಜ್ಯಮಟ್ಟದ ಸಹಕಾರಿ ಹಾಗೂ ಹೈನುಗಾರಿಕೆ ಪ್ರಶಸ್ತಿ ಪುರಸ್ಕೃತರಾದ ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ ವಿಶೇಷ ಗೌರವ ನೀಡಲಾಗುತ್ತದೆ. ಸಾಹಿತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಂಕರ ಯು. ಜೋಗಿ ಮಂಜೇಶ್ವರ ಅವರಿಗೆ ಸನ್ಮಾನಿಸಲಾಗುತ್ತದೆ.
ಅಂದು ರಾತ್ರಿ 9.30ಕ್ಕೆ ಓಂಕಾರ ಕಲಾವಿದರ ನಿರ್ದೆಶನದಲ್ಲಿ ಆಪುದೆಲ್ಲಾ ಒಳ್ಳೆದಕ್ಕೆ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.