ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಹಳಗೇರಿ ಗ್ರಾಮದ ಶ್ರೀ ಗೆಂಡದ ಹೈಗುಳಿ ಶ್ರೀ ಗಣಪನಾಯಕ ಸಪರಿವಾರ ದೇವಸ್ಥಾನದ ಪುನರ್ ಪ್ರತಿಷ್ಠಾ ದ್ವಿತೀಯ ವರ್ಧತ್ಯೋತ್ಸವ, ವಾರ್ಷಿಕ ಗೆಂಡ ಹಾಗೂ ಮಂಡಲೋತ್ಸವ ಜ.31 ರಿಂದ ಫೆ.2ರ ತನಕ ನಡೆಯಲಿದೆ.
ಜ.31ರ ಬೆಳಿಗ್ಗೆ 9.00 ರಿಂದ ಶ್ರೀ ಭೂನಾಗ ದೇವರಿಗೆ ನವಕ ಪ್ರಧಾನ ಕಲಾಶಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6.00ರಿಂದ ಪುನರ್ ಪ್ರತಿಷ್ಠಾ ವರ್ಧತ್ಯೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಫೆ.1ರ ರಾತ್ರಿ 9.00ರಿಂದ ಗೆಂಡಸೇವೆ, 9.30ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಫೆ.2ರ ಬೆಳಿಗ್ಗೆ 5.30ರಿಂದ ಮಂಡಲೋತ್ಸವ, 7.00ರಿಂದ ತುಲಭಾರ ಸೇವೆ ಹಾಗೂ ಅದೇ ದಿನ ರಾತ್ರಿ 7.00ರಿಂದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಕಲಾಮಂಡಳಿ ಇವರಿಂದ ಪೌರಣಿಕ ಕಥಾಪ್ರದರ್ಶನಗೊಳ್ಳಲಿದೆ.