ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಗೋಳಿಹೊಳೆ ಗ್ರಾಮದ ಹುಂಚನಿ ಜನ್ಮನೆ ತಿರುವಿನಲ್ಲಿ ಮರಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಚಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರದೀಪ್ ಎಂಬವರ ತೋಟಕ್ಕೆ ಮಣ್ಣು ಹಾಕಲೆಂದು ಸಾಗುತ್ತಿದ್ದ ಟಿಪ್ಪರ್ ಚಾಲಕನ ಹತೋಟಿ ತಪ್ಪಿ ತಗ್ಗುಪ್ರದೇಶಕ್ಕೆ ಧುಮುಕಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ಟಿಪ್ಪರ್‌ನ ಮುಂಬದಿ ನಜ್ಜುಗುಜ್ಜಾಗಿದ್ದು, ಮಹಾಬಲ, ಹನುಮಂತ ಹಾಗೂ ಚಾಲಕ ಚಂದ್ರ ಸಿಲುಕಿ ಕೊಂಡಿದ್ದರು. ಮೂವರ ಪೈಕಿ ಚಾಲಕ ಚಂದ್ರ ಸ್ಥಳದಲ್ಲೇ ಮೃತ ಪಟ್ಟಿದ್ದರೆ, ಮಹಾಬಲ ಹಾಗೂ ಹನುಮಂತ ಅವರನ್ನು ಹೊರಗೆ ತೆಗೆದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.