ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ನಿರ್ಮಾಣ ಹಂತದ ಮನೆಯ ಸ್ಲಾಬ್‌ನಿಂದ ಕೆಳಗಡೆ ಬಿದ್ದು ಮನೆಯ ಯಜಮಾನ ಮೃತಪಟ್ಟ ಘಟನೆ ಇಲ್ಲಿನ ಬೇಳೂರು ದೇವಸ್ಥಾನಬೆಟ್ಟು, ಕಲ್ಮಂಡೆಯಲ್ಲಿ ಸೋಮವಾರ ಸಂಭವಿಸಿದೆ. ಸ್ಥಳೀಯ ನಿವಾಸಿ ಗೋಪಾಲ ಆಚಾರ್ಯ (62) ಅವರು ಮೃತಪಟ್ಟ ವ್ಯಕ್ತಿ.
ಅವರು ಬೇಳೂರಿನಲ್ಲಿ ಹೊಸ ಮನೆಯನ್ನು ನಿರ್ಮಿಣ ಮಾಡುತ್ತಿದ್ದು, ಅದನ್ನು ನೋಡಲು ಮಕ್ಕಳ ಜೊತೆ ಹೋಗಿದ್ದರು. ಈ ವೇಳೆ ಗೋಪಾಲ ಮನೆಯ ಮೊದಲ ಅಂತಸ್ತಿಗೆ ಹೋಗಿ ನೋಡುತ್ತಿರುವಾಗ ಆಯತಪ್ಪಿ ಸ್ಲಾಬ್‌ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದ ವೈದ್ಯರು ಗೋಪಾಲ ಆಚಾರ್ಯ ಅವರು ಅದಾಗಲೇ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಈ ಬಗ್ಗೆ ಕೋಟ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.