ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಬಸ್ರೂರು ಶ್ರೀ ಕಾಶೀ ಮಠಕ್ಕೆ ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ್ ಪಾಂಡುರಂಗರಾವ್ ಸಾವಂತ್ ಅವರು ಗುರುವಾರ ಸಂಜೆ ಭೇಟಿ ನೀಡಿದರು.
ದೇವರ ಹಾಗೂ ದೇವಳದ ಪ್ರಾಂಗಣದಲ್ಲಿರುವ ಉಭಯ ಗುರುಗಳ ವೃಂದಾವನಗಳ ದರ್ಶನ ಪಡೆದ ಸಿಎಂ ಪ್ರಮೋದ ಸಾವಂತ್, ಬಾಲಕಾಶ್ರಮದ ಮಕ್ಕಳೊಂದಿಗೆ ಕೆಲಕಾಲ ಕುಶಲೋಪರಿ ನಡೆಸಿದರು. ಮಠಕ್ಕೆ ಭೇಟಿ ನೀಡಿದ ಅವರನ್ನು ಮಠದ ಆಡಳಿತ ಮಂಡಳಿ ಸದಸ್ಯರು ಶಾಲು ಹೊದಿಸಿ ದೇವರ ಪ್ರಸಾದ ನೀಡಿ ಗೌರವಿಸಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ರಂಗನಾಥ ಪಡಿಯಾರ್, ಬಿ.ಗಣೇಶ ಕಾಮತ್, ರಾಮಚಂದ್ರ ಪಡಿಯಾರ್, ದಿನಕರ ಶೆಣೈ, ಪದ್ಮನಾಭ ಶೆಣೈ ಕುಂದಾಪುರ, ದೇವಳದ ಅರ್ಚಕ ಸುರೇಂದ್ರ ಭಟ್, ಸಮಾಜ ಭಾಂದವರು, ಮತ್ತಿತರರು ಉಪಸ್ಥಿತರಿದ್ದರು.










