ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ವತ್ತಿನಕಟ್ಟೆ ಗ್ರಾಮದ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ವರ್ಧಂತ್ಯೋತ್ಸವ ಹಾಗೂ ಭಜನೋತ್ಸವವು ಫೆ.19 ಬುಧವಾರದಂದು ಜರುಗಲಿದೆ.
ಬೆಳಿಗ್ಗೆ 7.30ಕ್ಕೆ ಭಜನಾ ದೀಪ ಸ್ಥಾಪನೆ ಹಾಗೂ ಗಂಟೆ 9.00 ರಿಂದ ಶ್ರೀ ದೇವಿಗೆ ಕಲಶಾಭೀಷೇಕ, ಚಂಡಿಕಾ ಹೋಮ, ನಾಗದೇವರ ಸನ್ನಿದಿಯಲ್ಲಿ ಕಲಾಹೋಮ, ಕಲಶಾಭಿಷೇಕ, ಮಹಾಪೂಜೆ, ಚಂಡಿಕಾಹೋಮ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 6.00ರಿಂದ ನಗರೋತ್ಸವ ಮತ್ತು ರಾತ್ರಿ 8.00 ಕ್ಕೆ ರಂಗಪೂಜೆ, ದೀಪ ವಿಸರ್ಜನೆ, ಮಹಾಪೂಜೆ ಪ್ರಸಾದ ವಿತರಣೆ, 8.30ರಿಂದ ಅನ್ನಸಂತರ್ಪಣೆ ನಡೆಯಲಿದೆ.