ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿಪ್ರರು ಸಾದಾ ಲೋಕದ ಹಿತವನ್ನು ಬಯಸುವವರು, ಹುಟ್ಟಿನಿಂದಲ್ಲ ನಮ್ಮ ಒಳ್ಳೆಯ ತನದಿಂದ ನಾವು ಸಮಾಜಕ್ಕೆ ಅನುಕರಣಿಯವಾಗಬೇಕು ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಿಗಬೇಕು, ಶಿಸ್ತು ಶಿಷ್ಟಾಚಾರ ನಮ್ಮ ಬದುಕಿನ ಪ್ರಧಾನ ಅಂಗವಾದಾಗ ಜೀವನ ಆದರ್ಶವಾಗಿರುತ್ತದೆ. ಧರ್ಮರಾಯನ ಧರ್ಮಪರಾಯಣತೇ, ಕರ್ಣನ ತ್ಯಾಗ, ಶ್ರೀರಾಮಚಂದ್ರನ ಆದರ್ಶ ಅಳವಡಿಸಿಕೊಂಡಾಗ ನಾವು ಸಮಾಜಕ್ಕೆ ಆದರ್ಶರಾಗುತ್ತೇವೆ ಎಂದು ನಿವೃತ್ತ ಸೈನಿಕ ಹಾಗೂ ಅಂಕಣಕಾರ ಬೈಂದೂರು ಚಂದ್ರಶೇಖರ ನಾವುಡ ಹೇಳಿದರು.
ಅವರು ಕಿರಿಮಂಜೇಶ್ವರ ಶ್ರೀ ಗುರುನರಸಿಂಹ ಸಭಾ ಭವನದಲ್ಲಿ ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯ ಇದರ 30ನೇ ವಾರ್ಷಿಕ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಿದರು.
ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಇದರ ಉಪಾಧ್ಯಕ್ಷ ಕೃಷ್ಣಾನಂದ ಚಾತ್ರ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ಯುವಸಮುದಾಯ ಸಂಘಟನಾತ್ಮಕ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡು ನಮ್ಮ ಆಚಾರ ವಿಚಾರಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿವಹಿಸಬೇಕೆಂದು ಹೇಳಿದರು.
ಪ್ರತಿಭಾವಂತ ವಿದ್ಯಾಥಿಗಳಾದ ಪೂಜಾ ಕಾರಂತ, ಕವನ ನಾವುಡ, ಐಶ್ವರ್ಯ ವೈದ್ಯ, ಪ್ರಥಮ್ ಶ್ಯಾನುಭೋಗ್, ಪ್ರಣವ್ ಅಡಿಗ ಅವರುಗಳನ್ನು ಪ್ರತಿಭಾಪುರಸ್ಕಾರದ ಪ್ರಾಯೋಜಕ ಉದ್ಯಮಿ ಕೆ. ಉಮೇಶ್ ಶ್ಯಾನುಭೋಗ್ ನೆರವೆರಿಸಿದರು.
ವಿಶೇಷ ಸಾಧನೆಗಾಗಿ ಚಿತ್ರ ಕಲಾವಿದ ಮಂಜುನಾಥ ಮಯ್ಯ ಉಪ್ಪುಂದ, ಹೈನುಗಾರಿಕಾ ಕ್ಷೇತ್ರದ ಸಾಧನೆಗಾಗಿ ಗಾಯತ್ರಿ ಭಟ್ ಮೊಗೇರಿ ಪರಿಷತ್ತಿನ ಪರವಾಗಿ ಸನ್ಮಾನಿಸಲಾಯಿತು.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಗುರುರಾಜ್ ಹೆಬ್ಬಾರ್, ಸಿ.ಎ ಪರೀಕ್ಷೆಯಲ್ಲಿ ಉತ್ತಿರ್ಣರಾದ ವಿದ್ಯಾಶ್ರೀ ಮಯ್ಯ ಇವರನ್ನು ವಲಯದ ಪರವಾಗಿ ಅಭಿನಂದಿಸಲಾಯಿತು.
ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ವಲಯಾಧ್ಯಕ್ಷ ಯು. ಸಂದೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ಗೌರವಾಧ್ಯಕ್ಷ ಕೆ. ಅರುಣ್ ಶ್ಯಾನುಭೋಗ್, ರತ್ನಾಕರ ಉಡುಪ, ಕಾರ್ಯದರ್ಶಿ ಪ್ರಶಾಂತ್ ಮಯ್ಯ , ಕೋಶಾಧ್ಯಕ್ಷ ಯೋಗೀಶ್ ಕಾರಂತ, ಮಹಿಳಾ ವೇದಿಕೆಯ ಕಾರ್ಯದರ್ಶಿ ವಿದ್ಯಾ ಅಡಿಗ, ಯುವ ವೇದಿಕೆಯ ಅಧ್ಯಕ್ಷ ಪದ್ಮನಾಭ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ವೇದಿಕೆಯ ಮಾಜಿ ಅಧ್ಯಕ್ಷೆ ಹೇಮಾ ಹೊಳ್ಳಾ ಪ್ರಾರ್ಥಿಸಿದರು, ದೀಟಿ ಸೀತಾರಾಮ ಮಯ್ಯ ಸ್ವಾಗತಿಸಿದರು, ಯೋಗೀಶ್ ಕಾರಂತ ಧನ್ಯವಾದಗೈದರು. ಕುಮಾರಿ ಚೈತ್ರಾ ವೈದ್ಯ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ವೇದಮೂರ್ತಿ ಜೋಶಿ ರಾಮಕೃಷ್ಣ ಕಾರಂತ, ವೇದಮೂರ್ತಿ ವಾಸುದೇವ ಕಾರಂತ ಹಳಗೇರಿ ಮುಖ್ಯ ಅತಿಥಿಗಳಾಗಿದ್ದರು. ವೇದಮೂರ್ತಿ ಲೋಕೇಶ್ ಅಡಿಗ ಬಡಾಕೇರೆ ಆಶಿರ್ವಚನ ನೀಡಿದರು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಅರುಣ್ ಶ್ಯಾನುಬೋಗ್, ಪದ್ಮನಾಭ ಹೆಬ್ಬಾರ್, ಯೋಗೀಶ್ ಕಾರಂತ್ ಉಪಸ್ಥಿತರಿದ್ದರು. ಕರ್ನಾಟಕ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಯು. ವೆಂಕಟರಮಣ ಭಟ್ ವಿದ್ಯಾರ್ಥಿ ವೇತನ ವಿತರಿಸಿದರು, ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು.
ವಲಯಾಧ್ಯಕ್ಷ ಯು. ಸಂದೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಅಡಿಗ ಮತ್ತು ಶ್ಯಾಮಲ ಭಟ್ ಪ್ರಾರ್ಥಿಸಿದರು, ಪ್ರಶಾಂತ ಮಯ್ಯ ಸ್ವಾಗತಿಸಿದರು, ಪದ್ಮನಾಭ ಹೆಬ್ಬಾರ್ ವಂದಿಸಿದರು, ಚೈತ್ರಾ ವೈದ್ಯ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ನೆಡೆದ ವಾರ್ಷಿಕ ಮಹಾ ಸಭೆಯಲ್ಲಿ ಕಳೆದ ಸಾಲಿನ ಆಯವ್ಯಯ ಮಂಡಿಸಿ ಒಪ್ಪಿಗೆ ಪಡೆಯಲಾಯಿತು. ಅಗಲಿದ ಸಮಾಜ ಬಾಂಧವರಿಗೆ ಮೌನ ಪ್ರಾರ್ಥನೆಯ ಮೂಲಕ ಶೃದ್ಧಾಂಜಲಿ ಅರ್ಪಿಸಲಾಯಿತು. ಸಮಾರೋಪ ಸಮಾರಂಭದ ನಂತರ ಮಹಿಳಾ ವೇದಿಕೆಯ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.