Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಗುಡೇ ದೇವಸ್ಥಾನದ ಏತ ನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ
    ಊರ್ಮನೆ ಸಮಾಚಾರ

    ಗುಡೇ ದೇವಸ್ಥಾನದ ಏತ ನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಬೈಂದೂರು:
    ಜನಪರ ಉದ್ದೇಶಗಳನ್ನು ಇರಿಸಿಕೊಂಡು ಅನುಷ್ಠಾನವಾಗುವ ಸರ್ಕಾರಿ ಯೋಜನೆಗಳು ಯಾವುದೇ ಕಾರಣದಿಂದಲೂ ಅರ್ಧಕ್ಕೆ ನಿಲ್ಲಬಾರದು. ಯೋಜನೆಯ ಅನುಷ್ಠಾನದಲ್ಲಿ ಫಲಾನುಭವಿಗಳಿಗೆ ಏನಾದರೂ ಗೊಂದಲಗಳಿದ್ದಲ್ಲಿ ಅದನ್ನು ಪರಿಹರಿಸುವ ಹಾಗೂ ಮನವರಿಕೆ ಮಾಡುವ ಕೆಲಸಗಳು ಇಲಾಖೆಯ ಅಧಿಕಾರಿಗಳಿಂದ ಆಗಬೇಕು, ಉದ್ದೇಶಿತ ಅಣೆಕಟ್ಟಿನಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗುವ ನೀರನ್ನು ಮಾತ್ರ, ಹೊರಕ್ಕೆ ಹಾಯಿಸುವ ಕೆಲಸವಾಗಬೇಕು ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

    Click Here

    Call us

    Click Here

    ಗುಡೇ ದೇವಸ್ಥಾನದ ಏತ ನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಶನಿವಾರ ಬೆಳಿಗ್ಗೆ ಭೇಟಿ ನೀಡಿ, ಯೋಜನಾ ಪ್ರದೇಶವನ್ನು ವೀಕ್ಷಣೆ ಮಾಡಿ, ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

    ಹಿಂದಿನ ಸರ್ಕಾರದ ಅವಧಿಯಲ್ಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಇವರಿಂದ ಈ ಯೋಜನೆಗೆ ಮಂಜೂರಾತಿ ದೊರಕಿತ್ತು. ವಾರಾಹಿ ಯೋಜನೆಯಡಿ ಬೈಂದೂರು ವಿಧಾನಸಭಾ ಕ್ಷೇತ್ರದ ಹಲವು ಭಾಗಗಳಿಗೆ ನೀರು ಒದಗಿಸುವ ಯೋಜನೆಗಳು ಯಶಸ್ವಿಯಾಗಿದೆ. ದೊಡ್ಡ ಮೊತ್ತದ ನೀರಾವರಿ ಯೋಜನೆಗಳಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗಬೇಕು. ಯಾರಿಗೂ ನೋವಾಗದಂತೆ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ.

    ಯೋಜನೆ ಪೂರ್ತಿಯಾಗಿ ಇಲಾಖೆಯ ವಶಕ್ಕೆ ತೆಗೆದುಕೊಳ್ಳುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬಳಕೆದಾರರ ಸಂಘ ಮಾಡಬೇಕು. ಬಳಕೆದಾರರ ಸಂಘದ ಬೈಲಾದಂತೆ ರಚನೆ ಮಾಡುವ ಕೆಲಸ ಇಲಾಖೆಯ ಮುತುವರ್ಜಿಯಿಂದ ಆಗಬೇಕು. ಆಗಮಾತ್ರ ಇಲ್ಲಿನ ಭಿನ್ನಾಭಿಪ್ರಾಯ ಶಾಶ್ವತವಾಗಿ ಪರಿಹಾರವಾಗುತ್ತದೆ. ಸ್ಥಳೀಯರ ಸಮಸ್ಯೆಗಳು ಏನು ಎನ್ನುವುದನ್ನು ಅರ್ಥೈಯಿಸಿಕೊಂಡು, ಪರಿಹಾರ ನೀಡುವ ಕೆಲಸವಾಗಬೇಕು. ನೀರಿನ ಸಂಗ್ರಹ ಹಾಗೂ 1.8 ಮೀಟರ್ ಎತ್ತರದ ಮಟ್ಟವನ್ನು ನಿರ್ದಿಷ್ಟ ಮಾನದಂಡದಲ್ಲಿ ಗುರುತಿಸುವ ಕೆಲಸವಾಗಬೇಕು. ಯೋಜನೆಯ ಉದ್ದೇಶವನ್ನು ಭವಿಷ್ಯದಲ್ಲಿ ಕಾರ್ಯನಿರ್ವಹಿಸುವ ಕೆಲಸವೂ ಬಳಕೆದಾರರ ಸಂಘದಿಂದಲೇ ಆಗಬೇಕು. ಸ್ಥಳೀಯರಿಗೆ ನೀರು ಕಡಿಮೆಯಾಗದಂತೆ ನೋಡಿಕೊಳ್ಳುವ ಹೊಣೆಯೂ ಇದೇ ಸಂಘದ್ದಾಗಿರಬೇಕು ಎಂದರು.

    ಎಲ್ಲರಿಗೂ ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡುವ ಹಕ್ಕಿದೆ. ಸಮಾಲೋಚನೆ, ವಿಸ್ತ್ರತ ಚರ್ಚೆ ಹಾಗೂ ಪರಿಹಾರದ ತಿಳುವಳಿಕೆಗಳು ಸಮಂಜಸವಾಗಿ ಮನದಟ್ಟಾದಾಗ ಸಮಸ್ಯೆಗಳಿಗೆ ಖಂಡಿತ ಪರಿಹಾರ ದೊರಕುತ್ತದೆ. ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಶಾಸಕರಾಗಲಿ, ನಾನಾಗಲಿ ಪ್ರತಿ ದಿನ ಬಂದು ಪರಿಹಾರ ಕಾರ್ಯಕ್ಕೆ ಕುಳಿತುಕೊಳ್ಳಲು ಆಗೋದಿಲ್ಲ. ಸ್ಥಳೀಯರ ಬೇಡಿಕೆಯ ಬಗ್ಗೆ ವಿಚಾರ ವಿಮರ್ಶೆ ಮಾಡಿ, ಸಣ್ಣ ಪುಟ್ಟ ಬದಲಾವಣೆ ಇದ್ದಲ್ಲಿ ಅದಕ್ಕೆ ಸ್ಪಂದಿಸಬೇಕು. ಇದಕ್ಕೆ ಹೆಚ್ಚುವರಿ ಅನುದಾನದ ಅವಶ್ಯಕತೆ ಇದ್ದಲ್ಲಿ, ಸರ್ಕಾರದಿಂದ ಕೊಡಿಸುವ ಬಗ್ಗೆಯೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

    Click here

    Click here

    Click here

    Call us

    Call us

    ಕೊಲ್ಲೂರು ಸೌಪರ್ಣಿಕ ನದಿಯಿಂದ 10 ರಿಂದ 15 ಟಿಎಂಸಿ ನೀರು, ಬಳಕೆಯಾಗದೆ ಸಮುದ್ರ ಸೇರುತ್ತಿದೆ. ಅರೆಹೊಳೆ ಅಸು-ಪಾಸಿನಲ್ಲಿ ಅಣೆಕಟ್ಟು ನಿರ್ಮಿಸಿ, ಪಂಪ್ ಮೂಲಕ ಮೇಲಕ್ಕೆ ಎತ್ತಿ, ಹೇರೂರು ಭಾಗದ ಕೆರೆಗಳಿಗೆ ಹಾಯಿಸಿದರೆ, ಇಲ್ಲಿಂದ ಹೆಚ್ಚುವರಿ ನೀರು ಎಡಮಾವಿನ ಹೊಳೆಗೆ ಬರುವುದರಿಂದ, ಅಣೆಕಟ್ಟಿನಲ್ಲಿ ನೀರಿನ ಹರಿವು ಹೆಚ್ಚಾಗಿ, ಧಾರಣ ಸಾಮರ್ಥ್ಯಕ್ಕಿಂತ ಹೆಚ್ಚು ನೀರು ಸಂಗ್ರಹವಾಗುತ್ತದೆ ಎಂದು ಸ್ಥಳೀಯ ಪ್ರಮುಖರು ಹೇಳಿದ ಸಲಹೆಗೆ ಸ್ಪಂದಿಸಿದ ಮಾಜಿ ಶಾಸಕರು, ಈ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಯೋಜನೆಯ ಸಾಧಕ-ಬಾಧಕಗಳ ಅಭಿಪ್ರಾಯ ಪಡೆದುಕೊಂಡು, ಸಚಿವರೊಂದಿಗೆ ಮಾತನಾಡುವುದಾಗಿ ನೀಡಿದರು.

    ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅರುಣ್ ಭಂಡಾರಿ, ಡ್ಯಾಂನಲ್ಲಿ ಮೂರು ಮೀಟರ್ ನೀರಿನ ಸಂಗ್ರಹದ ಧಾರಣ ಸಾಮರ್ಥ್ಯ ಅಂದಾಜಿಸಲಾಗಿದ್ದು, ಇದರಲ್ಲಿ 1.8 ಮೀಟರ್ ನೀರು ಶಾಶ್ವತ ಸಂಗ್ರಹವಾಗಿ ಅಣೆಕಟ್ಟಿನಲ್ಲಿಯೇ ಇರುತ್ತದೆ. 1.8 ಮೀಟರ್‌ಗಿಂತ್ ಜಾಸ್ತಿ ಸಂಗ್ರಹವಾದ ನೀರನ್ನು ಮಾತ್ರ ಪಂಪ್ ಮೂಲಕ ಎತ್ತಿ, ಇತರ ಉದ್ದೇಶಗಳಿಗೆ ಬಳಕೆ ಮಾಡಲು ಸಾಧ್ಯವಾಗುತ್ತದೆ. 1.8 ಮೀಟರ್‌ಗಿಂತ ಕಡಿಮೆ ಸಂಗ್ರಹವಾದಲ್ಲಿ ಪಂಪ್ ಕಾರ್ಯವೇ ಮಾಡೋದಿಲ್ಲ ಎಂದು ವಿವರಿಸಿದರು.

    ಗ್ರಾಪಂ ಸದಸ್ಯರಾದ ಸುಕೇಶ್ ಶೆಟ್ಟಿ, ಗಣೇಶ್ ಆಚಾರ್, ಸತೀಶ್ ಶೆಟ್ಟಿ ಉಪ್ರಳ್ಳಿ, ರಮೇಶ ಗಾಣಿಗ ಹೇರಂಜಾಲು, ಸುಭಾಶ್ ಶೆಟ್ಟಿ ಹಳಗೇರಿ, ಮಾಲಿಂಗ ಪೂಜಾರಿ ಹೇರಂಜಾಲು, ನರಸಿಂಹ ಹಳಗೇರಿ, ಮಾಚ ಪೂಜಾರಿ, ರಮೇಶ್ ದೇವಾಡಿಗ ಹಳಗೇರಿ ಇದ್ದರು.

    Like this:

    Like Loading...

    Related

    Byndoor
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ನೆಹರೂ ಮೈದಾನದ ನೆಲ ಬಾಡಿಗೆಗೆ ತಾಲ್ಲೂಕು ರೈತ ಸಂಘ ವಿರೋಧ: ಕೆ. ವಿಕಾಸ್ ಹೆಗ್ಡೆ

    10/12/2025

    ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಕಗೋತ್ಸವ ಕಾರ್ಯಕ್ರಮ

    10/12/2025

    ಮೂಡುಗಿಳಿಯರಿನ ಹೊನ್ನಾರಿ ಅಂಗನವಾಡಿ ಕೇಂದ್ರದಲ್ಲಿ ಅನ್ನಪ್ರಾಶನ

    10/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಗೃಹ ರಕ್ಷಕರ ಹುದ್ದೆ: ಅರ್ಜಿ ಆಹ್ವಾನ
    • ನೆಹರೂ ಮೈದಾನದ ನೆಲ ಬಾಡಿಗೆಗೆ ತಾಲ್ಲೂಕು ರೈತ ಸಂಘ ವಿರೋಧ: ಕೆ. ವಿಕಾಸ್ ಹೆಗ್ಡೆ
    • ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಕಗೋತ್ಸವ ಕಾರ್ಯಕ್ರಮ
    • ಮೂಡುಗಿಳಿಯರಿನ ಹೊನ್ನಾರಿ ಅಂಗನವಾಡಿ ಕೇಂದ್ರದಲ್ಲಿ ಅನ್ನಪ್ರಾಶನ
    • ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d