ಶಯದೇವಿಸುತೆ ಮರವಂತೆ ಅವರಿಗೆ ರಾಷ್ಟ್ರಕವಿ ಕುವೆಂಪು ಸಾಂಸ್ಕೃತಿಕ ಚೇತನ ಪ್ರಶಸ್ತಿ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮೈಸೂರು ಮತ್ತು ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ ರಿ. ಮೈಸೂರು – ಇವರ ಸಂಯುಕ್ತ ಆಶ್ರಯದಲ್ಲಿ ಸಂಸ್ಥೆಯ 40ನೇ ವಾರ್ಷಿಕೋತ್ಸವದ ಅಂಗವಾಗಿ “ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವ”ವು 2025 ಮೈಸೂರಿನ ಮಹಾರಾಜ ಇನ್‌ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ್‌ ಆಡಿಟೋರಿಯಂನಲ್ಲಿ ಇತ್ತೀಚಿಗೆ ನಡೆಯಿತು.

Call us

Click Here

ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ನಾಡೋಜ ಡಾ. ಮಹೇಶ್ ಜೋಷಿ ಅವರು ತಮ್ಮ ಅಮೃತಹಸ್ತದಿಂದ ಉದ್ಘಾಟಿಸಿದ ಈ ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕದ ಅಭ್ಯುದಯಕ್ಕೆ ನೀಡಿರುವ ವಿವಿಧ ಅತ್ಯಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಶಯದೇವಿಸುತೆ ಮರವಂತೆ(ಜ್ಯೋತಿ ಜೀವನ್‌ಸ್ವರೂಪ್) ಅವರಿಗೆ “ರಾಷ್ಟ್ರಕವಿ ಕುವೆಂಪು ಸಾಂಸ್ಕೃತಿಕ ಚೇತನ ಪ್ರಶಸ್ತಿಯನ್ನು  ಹಿರಿಯ ಸಾಹಿತಿಗಳು ಹಾಗೂ ವಿವಿಧ ಹಲವಾರು ಕ್ಷೇತ್ರಗಳ ಗಣ್ಯ ಸಾಧಕರ ಸಮ್ಮುಖದಲ್ಲಿ  ಪ್ರದಾನ ಮಾಡಲಾಯಿತು.

ಕಲಾರಾಧಕರು; ಕಲಾ ಪೋಷಕರೂ ಆದ ಶಯದೇವಿಸುತೆ ಮರವಂತೆಯವರು ಆಧ್ಯಾತ್ಮಿಕ ಚಿಂತಕರಾಗಿ, ಸಂಗೀತ-ಸಾಹಿತ್ಯ ಕಲಾ ಲೋಕದಲ್ಲಿ, ಯಕ್ಷಗಾನ ಕ್ಷೇತ್ರದಲ್ಲಿ, ಪತ್ರಿಕೋದ್ಯಮ ಹಾಗೂ ಹಲವಾರು ಮಾಧ್ಯಮ ರಂಗ – ಹೀಗೆಯೇ, ಹಲವಾರು ವಿವಿಧ ಕ್ಷೇತ್ರದಲ್ಲಿ ಬಿಂಬಿಸಿದ ಅವರಲ್ಲಿ ಹುದುಗಿರುವ ಅಪಾರ ಕಲಾಪ್ರತಿಭೆಯ ನಿರಂತರ ಸೇವೆಗೆ, “ಸೃಜನಶೀಲ ಯುವ ಪ್ರತಿಭಾನ್ವಿತ ಲೇಖಕಿ”, “ವರ್ಷದ ಕನ್ನಡ ಬರಹಗಾರ ಪ್ರಶಸ್ತಿ, “ರಂಗಸ್ಥಳ ರತ್ನ ಪ್ರಶಸ್ತಿ”, “ಕುಂದಶ್ರೀ ಪ್ರಶಸ್ತಿ”, “ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ್”, “ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ”,  “ಡಾ!! ಜಿ.ಡಿ ಜೋಶೀ ಗೌರವ ಪ್ರಶಸ್ತಿ”, “ಅತ್ಯುತ್ತಮ ಲೇಖಕಿ”, “ಅತ್ಯುತ್ತಮ ಅಂಕಣಕಾರ್ತಿ”, “ಅತ್ಯುತ್ತಮ ವರದಿಗಾರ್ತಿ”, “ಅತ್ಯುತ್ತಮ ಚಿತ್ರಕಥೆಗಾರ್ತಿ”, “ಅಕ್ಕಮಹಾದೇವಿ ಪ್ರಶಸ್ತಿ”, “ಹುಟ್ಟೂರ ಸಾಧಕ ಸಂಮ್ಮಾನ ಪ್ರಶಸ್ತಿ” ಹಾಗೂ, “ಮರವಂತೆಯ ಮಹಿಳಾ ಸಾಧಕಿ ಪ್ರಶಸ್ತಿ” , “ಸ್ಟೇಟ್ ಲೆವೆಲ್ ಅವಾರ್ಡ್”, “ಕನ್ನಡ ರಾಜ್ಯೋತ್ಸವ ಪ್ರಶಸ್ತಿ – 2023”, “ಕರುನಾಡ ಕಲಾ ಕೇಸರಿ; ಸಾಹಿತ್ಯ ರತ್ನ ಸಿರಿ” – ಎಂದೆಲ್ಲಾ ಹಲವೆಡೆ ಈಗಾಗಲೇ ಲಭಿಸಿರುವ ಸಾಕಷ್ಟು ಹಲವಾರು ಪ್ರಶಸ್ತಿ-ಪುರಸ್ಕಾರ; ಅಭಿನಂದನಾ-ಗೌರವ-ಸನ್ಮಾನ ಮನ್ನಣೆಗಳೆಲ್ಲಾ ಇವರ ಸ್ವಂತ ಪ್ರತಿಭೆಗೆ ಎಲ್ಲೆಡೆ ಸಿಕ್ಕಂತಹ ಪ್ರತ್ಯಕ್ಷ ಸಾಕ್ಷಿಗಳಾಗಿವೆ!

Leave a Reply