ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಅರಾಟೆ ಹೊಸ ಸೇತುವೆಯಲ್ಲಿ ಕಳೆದ ಜ.21 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಲೂರಿನ ನಿವಾಸಿ ಮಹಾಬಲ ಜೋಯಿಸ್ ಅವರ ಪುತ್ರ ರತ್ನಾಕರ ಜೋಯಿಸ್ (47) ಅವರು ಇತ್ತೀಚಿಗೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.
ಜ.21ರ ಬೆಳಗ್ಗೆ 4.55 ರ ಸುಮಾರಿಗೆ ಅರಾಟೆ ಹೊಸ ಸೇತುವೆಯಲ್ಲಿ ರತ್ನಾಕರ ಅವರು ಚಲಾಯಿಸುತ್ತಿದ್ದ ಕಾರಿಗೆ ರಫೀಕ್ ಎಂಬುವರು ಚಲಾಯಿಸುತ್ತಿದ್ದ ಲಾರಿ ಢಿಕ್ಕಿಯಾಗಿದೆ. ಪರಿಣಾಮ ರತ್ನಾಕರ ಅವರ ತಲೆಗೆ, ಮುಖಕ್ಕೆ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಕುಂದಾಪುರದ ಆಸ್ಪತ್ರೆಗೆ, ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ತಿಂಗಳಿಗೂ ಹೆಚ್ಚು ಕಾಲ ಜೀವನ್ಮರಣ ಹೋರಾಟ ನಡೆಸಿದ ರತ್ನಾಕರ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.










