ಬೈಂದೂರು: ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟನೆ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಮನುಷ್ಯನ ಜೀವದಲ್ಲಿರುವ ರಕ್ತ ಜಾತಿ ಧರ್ಮಾದಾರಿತವಲ್ಲ. ರಕ್ತದಾನದ ಮೂಲಕ ಅಪಾಯದಲ್ಲಿರುವ ರೋಗಿಯ ಜೀವರಕ್ಷಣೆಯಾಗುವುದನ್ನು ನಾವು ನಿತ್ಯ ಕಾಣುತ್ತಿದ್ದೇವೆ. ಆದರಿಂದ ರಕ್ತದಾನ ಮಾಡುವುದು ಮತ್ತು ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತ ಅಮೀನ್ ಕೋಡಿ ಹೇಳಿದರು.

Call us

Click Here

ಬೈಂದೂರು ರೋಟರಿ ಭವನದಲ್ಲಿ ಭಾನುವಾರ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಬೈಂದೂರು -ಶಿರೂರು ಘಟಕ, ಡಾ. ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ, ವಿಶ್ವಕರ್ಮ ಯುವಕ ಸಂಘ ಬಂದೂರು, ಜೆಸಿಐ ಬಂದೂರು ಸಿಟಿ, ರೋಟರಿ ಕ್ಲಬ್ ಬಂದೂರು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ, ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಮಾಡುವುದರಿಂದ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ರಕ್ತದಾನದಿಂದ ಇನ್ನೋರ್ವರ ಜೀವ ಉಳಿಸುವುದು ಮಾತ್ರವಲ್ಲದೆ ಓರ್ವ ವ್ಯಕ್ತಿ ರಕ್ತದಾನ ಮಾಡಿದ್ದಲ್ಲಿ ಮೂರು ಜನರ ಪ್ರಾಣವನ್ನು ಉಳಿಸಬಹುವುದಾಗಿದೆ ಹೀಗಾಗಿ ರಕ್ತದಾನ ಅತ್ಯಂತ ಶ್ರೇಷ್ಟ ದಾನವಾಗಿದೆ ಎಂದರು.

ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ಅಧ್ಯಕ್ಷ ಸೋಮಶೇಖರ ಜಿ. ಕಸ್ಟಮ್ ಅಧ್ಯಕ್ಷತೆ ವಹಿಸಿದ್ದರು. ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಯ್ಯ ಆಚಾರ್ಯ ಕಳಿ, ಬೈಂದೂರು ಸಿಟಿ ಜೆಸಿಐ ಅಧ್ಯಕ್ಷ ರಾಜು ಮೊಗವೀರ, ಬಂದೂರು ಸೇವಾ ಸಂಗಮ ಶಿಶು ಮಂದಿರದ ಅಧ್ಯಕ್ಷ ಮಂಜುನಾಥ ಶೆಟ್ಟಿ, ಮೊಗವೀರ ಯುವ ಸಂಘಟನೆ  ಜಿಲ್ಲಾ ನಿಕಟಪೂರ್ವಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ, ಮೊಗವೀರ ಯುವ ಸಂಘಟನೆ ಬಂದೂರು ಘಟಕದ ನಿಕಟಪೂರ್ವಾಧ್ಯಕ್ಷ ರವಿರಾಜ ಚಂದನ್ ಕಳವಾಡಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರವೀಂದ್ರ ಪುತ್ರನ್ರ್, ಮಾಜಿ ಕಾರ್ಯದರ್ಶಿ ರವೀಶ್ ಕೊರವಡಿ, ನಿಕಟಪೂರ್ವಾಧ್ಯಕ್ಷ  ಕೃಷ್ಣ  ಮೊಗವೀರ, ಡಾ. ಶರತ್ ಉಪಸ್ಥಿತರಿದ್ದರು. ನಟರಾಜ್ ಕಾರ್ಯಕ್ರಮ ನಿರ್ವಹಿಸಿದರು.

Click here

Click here

Click here

Call us

Call us

Leave a Reply