ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಲೂರು ಕಡೆಯಿಂದ ಮುಳ್ಳಿಕಟ್ಟೆ ಮಾರ್ಗವಾಗಿ ಬರುತ್ತಿದ್ದ ಕಾರೊಂದು ಗುಡ್ಡಮ್ಮಾಡಿ ಕ್ರಾಸ್ ಬಳಿ ಪಿಕ್ ಅಪ್ ವಾಹನಕ್ಕೆ ಡಿಕ್ಕಿಯಾಗಿದ್ದು, ಈ ವೇಳೆ ಕಾರಿನಲ್ಲಿ ಅಕ್ರಮವಾಗಿ ಗೋವನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಅಪಘಾತವಾದ ತಕ್ಷಣ ಪರಾರಿಯಾದ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ.
ಶುಕ್ರವಾರ ಸಂಜೆ ಅಕ್ರಮವಾಗಿ ಗಂಡು ಕರುವಿನ ಕಾಲನ್ನು ಕಟ್ಟಿ ಕಾರಿನಲ್ಲಿ ಸಾಗುಸುತ್ತಿದ್ದ ವೇಳೆ ಗುಡ್ಡಮ್ಮಾಡಿ ಕ್ರಾಸ್ ಬಳಿ ಅಪಘಾತವಾಗಿದೆ. ತಕ್ಷಣ ಕಾರಿನಲ್ಲಿದ್ದ ನಾಲ್ವರು ಆರೋಪಿಗಳಾದ ಮೊಹಮ್ಮದ್ ಸೀನಾನ್ ಗುಲ್ವಾಡಿ, ಮೊಹಮ್ಮದ್ ಅಬೀಬ್, ಮೊಹಮ್ಮದ್ ಅಬಾನ್ ಮೂಡುಗೋಪಾಡಿ, ತೌಹಿದ್ ಕಾರು ಬಿಟ್ಟು ಓಡಿಹೋಗಿದ್ದು ಸಮೀಪವೇ ಇದ್ದ ಸೌಪರ್ಣಿಕಾ ಹೊಳೆಗೆ ಹಾರಿದ್ದಾರೆ. ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಮೂವರನ್ನು ರಕ್ಷಿಸಿ ಬಳಿಕ ಬಂಧಿಸಿದ್ದಾರೆ. ತೌಹಿದ್ ಎಂಬಾತ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಬೈಂದೂರು ವೃತ್ತ ನಿರೀಕ್ಷಕ ಇನ್ಸೆಕ್ಟರ್ ಸವಿತ್ರ ತೇಜ್, ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್. ನಾಯ್ಕ ಮತ್ತು ಸಿಬ್ಬಂದಿ ಭೇಟಿ ನೀಡಿ ಆರೋಪಿಗಳನ್ನು ಬಂಧಿಸಿದ್ದು, ಇನ್ನೊರ್ವ ಪತ್ತೆಯಲ್ಲಿ ತೊಡಗಿದ್ದಾರೆ.
ಘಟನೆಯಲ್ಲಿ ಎರಡೂ ವಾಹನಗಳ ಜಖಂಗೊಂಡಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










