ಮೂಡಬಿದಿರೆ: ಹಳೆಗನ್ನಡ ಸಾಹಿತ್ಯಕ್ಕೆ ಅಸ್ತಮ ಎನ್ನುವುದಿಲ್ಲ. ಅದು ಎಲ್ಲಾ ಕಾಲದಲ್ಲೂ ಪ್ರತಿಪಲಿಸಲ್ಪಡುತ್ತದೆ. ಪಂಪ, ರನ್ನ, ಕುಮಾರವ್ಯಾಸರಾದಿಯಾಗಿ ಎಲ್ಲಾ ಕವಿಗಳ ತಮ್ಮ ಸಾಹಿತ್ಯದಲ್ಲಿ ಹೊಸತನವನ್ನು ಕಟ್ಟಿಕೊಡುವ ಮತ್ತು ಅದು ಸದಾ ಕಾಲ ಪ್ರಸ್ತುವಾಗುವ ವಸ್ತು ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ ಡಾ. ಎನ್. ಎಸ್. ತಾರಾನಾಥ್ ಹೇಳಿದರು.
ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಿದ ಮೊದಲ ವಿಚಾರಗೋಷ್ಠಿಯಲ್ಲಿ ಪ್ರಾಚೀನ ಕನ್ನಡ ಸಾಹಿತ್ಯ: ಹೊಸತನದ ಹುಡುಕಾಟ’ ಎಂಬ ವಿಷಯದ ಕುರಿತು ಮಾತನಾಡಿದರು.