ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಯಡ್ತರೆ ಪ್ರಧಾನ ಕಛೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆಯನ್ನು ಸಂಘದ ಅಧ್ಯಕ್ಷರಾದ ಟಿ. ನಾರಾಯಣ ಹೆಗ್ಡೆ ಅವರು ನೆರವೇರಿಸಿದರು.




ಅರ್ಚಕರಾದ ಕೇಂಜ ಶ್ರೀಧರ ತಂತ್ರಿಗಳು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ. ಬಾಬು ಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ನಿರ್ದೇಶಕರಾದ ಅರುಣ ಕುಮಾರ್, ಎಮ್.ಎಚ್. ಗುರುದತ್ತ, ಡಿ. ಸದಾಶಿವ ಶೇರುಗಾರ್, ಹೆರಿಯ ದೇವಾಡಿಗ, ವಸಂತ ಕುಮಾರ್ ಶೆಟ್ಟಿ, ಚಿಕ್ಕು ಪೂಜಾರಿ, ನಾಗರಾಜ ಶೆಟ್ಟಿ, ಸತೀಶ್ ಯಡ್ತರೆ, ಶಂಕರ ನಾಯ್ಕ, ಜ್ಯೋತಿ ಪೂಜಾರಿ, ಎಚ್.ವಿಜಯಾ ಶೇರುಗಾರ್, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತಾಪಚಂದ್ರ ಶೆಟ್ಟಿ ಉಪಸ್ಥಿತರಿದ್ದರು.










