ಮೂಡಬಿದಿರೆ: ನಮ್ಮ ವಚನಕಾರರು ತಮ್ಮ ಪ್ರಕರವಾದ ವಿಚಾರದಿಂದ, ಕೀರ್ತನಕಾರರು ನಯವಾದ ಪದಗಳಿಂದ ಸಮಾಜದ ಆಗುಹೋಗುಗಳ ಬಗ್ಗೆ ಬರೆಯುತ್ತಲೇ ಬಂದಿದ್ದಾರೆ. ಅಂದಿನಿಂದಲೂ ಜನರು ಅದನ್ನು ಒಪ್ಪಿಕೊಂಡು ಬಂದಿದ್ದಾರೆ. ಹೊಸತನದ ಹುಡುಕಾಟವೆಂಬುದು ಅಂದೇ ಆರಂಭವಾಗಿದೆ ಎಂದು ಡಾ. ಕೃಷ್ಣಮೂರ್ತಿ ಹನೂರು ಹೇಳಿದರು.
ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಿದ ಮೊದಲ ವಿಚಾರಗೋಷ್ಠಿಯಲ್ಲಿ ಮಧ್ಯಕಾಲಿನ ಕನ್ನಡ ಸಾಹಿತ್ಯ: ಹೊಸತನದ ಹುಡುಕಾಟ’ ಎಂಬ ವಿಷಯದ ಕುರಿತು ಮಾತನಾಡಿದರು. ವಚನ ಕೀರ್ತನೆಗಳ ಮೂಲಕ ಮಧ್ಯಕಾಲಿನ ಸಾಹಿತ್ಯ ಇಂದಿಗೂ ಪ್ರಸ್ತತವಾಗಿದ್ದರೇ ಅದು ಹೊಸತನದ ರೂಪಾಂತರವೇ ಆಗಿದೆ ಎಂದವರು ಹೇಳಿದರು. ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಟಿ. ವಿ. ವೆಂಕಟಾಚಲ ಶಾಸ್ರ್ತೀ, ಡಾ. ನಾ. ದಾಮೋದರ್ ಉಪಸ್ಥಿತರಿದ್ದರು.