ಮಾ.18ರಂದು ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಿ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಾ.18ರಂದು ‘ಅಂಗಾರಕ ಸಂಕಷ್ಟಿ’ ನಡೆಯಲಿದೆ.

Call us

Click Here

ಈ ಪ್ರಯುಕ್ತ ಬೆಳಗ್ಗೆ 5 ಗಂಟೆಗೆ ಪ್ರಾತಪೂಜೆ, 11.30ಕ್ಕೆ ಪಂಚಾಮೃತ ಅಭಿಷೇಕ ಪೂರ್ವಕ ಉಪನಿಷತ್ ಕಲಶಾಭಿಷೇಕ, 12 ಗಂಟೆಗೆ ‘ಸಹಸ್ರನಾರಿಕೇಳ ಗಣಹೋಮದ ಪೂರ್ಣಾಹುತಿ’ ಸತ್ಯ ಗಣಪತಿ ವೃತ ಕಲೋಕ್ತ ಪೂಜಾ ಸಹಿತ ಮಹಾಪೂಜೆ ನಡೆಯಲಿದೆ.

ರಾತ್ರಿ 8 ಗಂಟೆಗೆ ಸಾಮೂಹಿಕ ಮಹಾ ರಂಗಪೂಜಾ ಹಾಗೂ ರಜತ ಪಲ್ಲಕ್ಕಿ ಮತ್ತು ರಜತ ರಥೋತ್ಸವ ಜರುಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 5.30ರಿಂದ ಗಣೇಶ್ ಬೀಜಾಡಿ ಹಾಗೂ ಬಳಗದವರಿಂದ ‘ದಾಸ ಗಾನಾಮೃತ’ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply